ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಸ್ತೆಯಲ್ಲಿ ಕೂಗಿದರೆ ಚುನಾವಣಾ ಆಯೋಗದ ಅಧ್ಯಕ್ಷರನ್ನು ತೆಗೆದುಹಾಕಲು ಆಗುವುದಿಲ್ಲ, ಸರಿಯಾದ ಪ್ರಕ್ರಿಯೆ ಅನುಸರಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

admin by admin
October 8, 2026
in Newsbeat, State, ನ್ಯೂಸ್ ಬೀಟ್, ರಾಜ್ಯ
karnataka-drought-relief-r-ashok-criticizes-government-siddaramaiah-politics

karnataka-drought-relief-r-ashok-criticizes-government-siddaramaiah-politics

Share on FacebookShare on TwitterShare on WhatsappShare on Telegram

ಚಿತ್ರದುರ್ಗ, ಚುನಾವಣಾ ಆಯೋಗದ ಅಧ್ಯಕ್ಷರನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಸುದೀರ್ಘವಾಗಿ ಚರ್ಚೆಯಾಗಿ ಬಹುಮತ ಸಾಬೀತಾಗಿ ರಾಷ್ಟ್ರಪತಿಯ ಬಳಿಗೆ ಹೋಗಬೇಕಾಗುತ್ತದೆ. ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ನಾನು ರಸ್ತೆಯಲ್ಲಿ ಕೂಗಿದ ಮಾತ್ರಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ತೆಗೆದುಹಾಕಲು ಆಗುವುದಿಲ್ಲ. ಎಲ್ಲಕ್ಕೂ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಬದುಕಿನ ಪ್ರಯುಕ್ತ ಬಿಜೆಪಿಯಿಂದ ನಡೆದ ಸೇವಾ ಜ್ಯೋತಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

Related posts

r-ashoka-disabled-persons-honorarium-release-demand-karnataka

ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ

October 8, 2026
parks-land-use-bill-withdrawn-bjp-victory-r-ashoka-seven-day-assembly

‘ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್

October 8, 2026

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಭಟನೆಯ ಹಕ್ಕು ಇದೆ. ಆದರೆ ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗದ ಅಧ್ಯಕ್ಷರನ್ನು ವಜಾ ಮಾಡಬೇಕೆಂದರೆ ಅದಕ್ಕೆ ಸೂಕ್ತವಾದ ಪ್ರಕ್ರಿಯೆ ಇದೆ. ಹಿಂದಿನ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಕೂಡ ಈ ಎಲ್ಲ ಪ್ರಕ್ರಿಯೆಗಳನ್ನು ರೂಪಿಸಿದ್ದರು. ಈ ಪ್ರಕ್ರಿಯೆಯನ್ನು ಅನುಸರಿಸದ ರಾಹುಲ್‌ ಗಾಂಧಿ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ ಸಾಂವಿಧಾನಿಕ ಸಂಸ್ಥೆಗೆ ಅಪಮಾನ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇಲ್ಲಿ ಚುನಾವಣೆ ಸರಿಯಾಗಿ ನಡೆದಿಲ್ಲ ಎಂದಾದರೆ ಕಾಂಗ್ರೆಸ್‌ ನಾಯಕರು ರಾಜೀನಾಮೆ ನೀಡಬೇಕು. ಕೇರಳದಲ್ಲೂ ಬಿಜೆಪಿ ಗೆದ್ದಿಲ್ಲ. ಕಾಂಗ್ರೆಸ್‌ ಸೋಲುವ ಕಡೆ ಮಾತ್ರ ಚುನಾವಣಾ ಆಯೋಗ ಸರಿಯಿಲ್ಲ ಎನ್ನುವುದು ರಾಹುಲ್‌ ಗಾಂಧಿಯವರ ಅಭಿಪ್ರಾಯ. ಅವರು ವಿರೋಧ ಪಕ್ಷದ ನಾಯಕರಾಗಲೂ ಕೂಡ ಅನರ್ಹರು. ಇಡಿ, ಸಿಬಿಐ ಎಲ್ಲವನ್ನೂ ಬಿಜೆಪಿ ಸಂಸ್ಥೆಗಳು ಎಂದು ಆರೋಪ ಮಾಡುತ್ತಿದ್ದಾರೆ. ಕೆಪಿಎಸ್‌ಸಿ ಅಕ್ರಮದ ತನಿಖೆಗೆ ಎಸ್‌ಐಟಿ ಮಾಡಿದ ಹೈಕೋರ್ಟ್‌ ಮೇಲೆ ಕೂಡ ಇವರು ಆರೋಪ ಮಾಡುತ್ತಾರೆ. ಸುಪ್ರೀಂ ಕೋರ್ಟ್‌ಗೂ ಇವರು ಬೆಲೆ ನೀಡುವುದಿಲ್ಲ. ಇವರ ಮನೆಯ ಮೇಲೆ ದಾಳಿ ಮಾಡಿ ಕೋಟಿಗಟ್ಟಲೆ ಲೂಟಿ ಮಾಡಿದ್ದು ಜನರಿಗೆ ಗೊತ್ತಾದ ಕೂಡಲೇ ಇಡಿ ಮೇಲೆ ಆರೋಪ ಮಾಡಲು ಆರಂಭಿಸುತ್ತಾರೆ. ಕಾಂಗ್ರೆಸ್‌ ಹೀಗೆಯೇ ಇದ್ದರೆ ಕರ್ನಾಟಕದಲ್ಲೂ ಬಹುಮತ ಕಳೆದುಕೊಳ್ಳುತ್ತದೆ ಎಂದರು.

ಪಿತ್ತ ನೆತ್ತಿಗೇರಿದೆ

ಸಿಎಂ ಡಿ.ಕೆ.ಶಿವಕುಮಾರ್‌ ವೀರಶೈವ ಲಿಂಗಾಯತ ಸ್ವಾಮೀಜಿಗಳ ಮುಂದೆ ನಿಂತು ನನ್ನ ಸೇವೆ ಮಾಡಿ ಎಂದಿದ್ದಾರೆ. ಅವರಿಗೆ ಪಿತ್ತ ನೆತ್ತಿಗೇರಿದೆ. ನಾವ್ಯಾರೂ ಇದನ್ನು ವರದಿ ಮಾಡಿಲ್ಲ. ಮಾಧ್ಯಮಗಳಲ್ಲೇ ಇದು ವರದಿಯಾಗಿ ಬಂದಿದೆ. ಇದ್ದಿದ್ದು ಇದ್ದ ಹಾಗೆಯೇ ವೀಡಿಯೋ ಬಂದಿದೆ. ಈ ವೀಡಿಯೋ ತಿರುಚಲು ಹೇಗೆ ಸಾಧ್ಯ? ಈಗಿನ ಕಾಲದಲ್ಲಿ ಯಾವುದನ್ನೂ ತಿರುಚಲು ಸಾಧ್ಯವಿಲ್ಲ. ಸಿಎಂಗೆ ಮಾನವಿದ್ದರೆ ಎಲ್ಲ ಸ್ವಾಮೀಜಿಗಳ ಮುಂದೆ ಕ್ಷಮೆ ಯಾಚಿಸಲಿ. ಅದನ್ನು ಬಿಟ್ಟು ಮಾಧ್ಯಮದವರ ಮೇಲೆ ಆರೋಪ ಮಾಡುವುದು ಬೇಡ. ಮಾಧ್ಯಮಗಳು ಎಲ್ಲ ವೀಡಿಯೋಗಳನ್ನು ಪ್ರಸಾರ ಮಾಡಬೇಕು. ಇವರು ಎಷ್ಟು ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ಹಿಂದೂ ಧರ್ಮದ ಬಗ್ಗೆ ಹೇಗೆ ಮಾತಾಡುತ್ತಾರೆ ಎಂದು ಗೊತ್ತಾಗಲಿ. ಮುಸ್ಲಿಂ ಮೌಲ್ವಿಗಳ ಸಭೆಗೆ ಹೋಗಿ ನೀವು ನನ್ನ ಸೇವೆ ಮಾಡಿ ಎಂದು ಹೇಳಲು ಮುಖ್ಯಮಂತ್ರಿಗೆ ಆಗುತ್ತದೆಯೇ? ಹಿಂದೂ ಎಂದು ನಾಟಕವಾಡುವುದು ಬೇಡ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಬದುಕಿನ ಪ್ರಯುಕ್ತ ಸೇವಾ ಜ್ಯೋತಿ ಯಾತ್ರೆ ನಡೆದಿದೆ. ಸಮಾಜದ ವಿವಿಧ ಸಮುದಾಯಗಳಿಗೆ ಸೇವಾ ಸಂಕಲ್ಪ ಅಭಿಯಾನದ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ. ಭಾರತದ ವಿಶ್ವಗುರುವಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದರು.

ShareTweetSendShare
Join us on:

Related Posts

r-ashoka-disabled-persons-honorarium-release-demand-karnataka

ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ

by admin
October 8, 2026
0

ತಕ್ಷಣ ಗೌರವಧನ ಬಿಡುಗಡೆಗೆ ಆಗ್ರಹ; ಆಂಧ್ರ ಮಾದರಿಯಲ್ಲಿ 5 ಸಾವಿರಕ್ಕೆ ಹೆಚ್ಚಿಸಿ ಎಂದು ಒತ್ತಾಯ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಸೇವಾ ಭದ್ರತೆಗೆ ಆಗ್ರಹಿಸಿ ಅಶೋಕ...

parks-land-use-bill-withdrawn-bjp-victory-r-ashoka-seven-day-assembly

‘ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್

by admin
October 8, 2026
0

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮೇಲೆಯೇ ಹಾಗೂ ತಮ್ಮ ಸಂಪುಟದ ಐದಾರು ಸಚಿವರ ಮೇಲೆ ‘ಹನಿ ಟ್ರ್ಯಾಪ್’ ಪ್ರಯತ್ನ ನಡೆದಿದೆ ಎಂದು ಹೇಳುತ್ತಿದ್ದಾರೆ....

samudra-manthana-skanda-ashok-police-officer-kannada-movie

ಸಮುದ್ರ ಮಂಥನ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾದ ನಟ ಸ್ಕಂದ ಅಶೋಕ್

by admin
October 8, 2026
0

  ಯಶ್ವಂತ್ ಕುಮಾರ್ ಮತ್ತು ಮಂದಾರ ಬತ್ತಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸಮುದ್ರ ಮಂಥನ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಕಂದ...

bhavanthara-tanvi-rao-lakshmi-baramma-sandalwood-debut

ಸ್ಯಾಂಡಲ್‌ವುಡ್ ನಾಯಕಿಯಾಗಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್: ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ

by admin
October 8, 2026
0

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ 'ರಾಧೇಶ್ಯಾಮ'...

premada-oorali-rashmika-ram-appreciation-kannada-movie

ಪ್ರೇಮದ ಊರಲಿ’ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೆಚ್ಚುಗೆ: ಸುಂದರ ಪ್ರೇಮಕಥೆಗೆ ನಟಿಯ ಶುಭಹಾರೈಕೆ!

by admin
October 8, 2026
0

  ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಚಿತ್ರತಂಡಕ್ಕೆ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಸಾಥ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram