ADVERTISEMENT
Friday, November 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗ್ಯಾರಂಟಿ ಹೆಸರಿನಲ್ಲಿ ಆಸೆ, ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

admin by admin
November 6, 2026
in Newsbeat, State, ರಾಜ್ಯ
r-ashoka-slams-congress-government-price-hike-nandini-ksrtc-bmtc-diwali

r-ashoka-slams-congress-government-price-hike-nandini-ksrtc-bmtc-diwali

Share on FacebookShare on TwitterShare on WhatsappShare on Telegram

ದೀಪಾವಳಿ ಹೊಸ್ತಿಲಲ್ಲೇ ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಏರಿಕೆ; KSRTC ಬಸ್ ಪಾಸ್ ದರ ಶೇ.23, BMTC ಪಾಸ್ ದರ ಶೇ.25ರಷ್ಟು ಹೆಚ್ಚಳ

ಬೆಂಗಳೂರು: ಒಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಆಸೆ ತೋರಿಸಿ, ಮತ್ತೊಂದೆಡೆ ನಿತ್ಯಬಳಕೆಯ ವಸ್ತುಗಳಿಂದ ಹಿಡಿದು ಸಾರ್ವಜನಿಕ ಸಾರಿಗೆಯವರೆಗೆ ಎಲ್ಲದರ ದರವನ್ನೂ ಹೆಚ್ಚಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಬದುಕಿನ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

Related posts

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ₹1,400 ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ತಮ್ಮ 42 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಹಾಯಕ ಕುಟುಂಬದ ಕಣ್ಣೀರು ಒರೆಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ತಾಲೂಕಿನ ಕನಕಾಪುರದ ರಾಜಪ್ಪ ಅವರ ಕುಟುಂಬದ ಗೋಳು ಹೃದಯ ವಿದ್ರಾವಕವಾಗಿದೆ. ಹುಟ್ಟಿನಿಂದಲೇ ಅಂಗವೈಕಲ್ಯ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 42 ವರ್ಷದ ಮಗನಿಗೆ ಸಿಗಬೇಕಾದ ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. 2010ರಿಂದ ನಿರಂತರವಾಗಿ ಬರುತ್ತಿದ್ದ ಮಾಸಾಶನವನ್ನು 2023ರಲ್ಲಿ ಸ್ಥಗಿತಗೊಳಿಸಲಾಗಿದೆ. ಅಂದು ₹1,000 ಇದ್ದ ಮಾಸಾಶನ ಇಂದು ₹1,400ಕ್ಕೆ ಏರಿಕೆಯಾಗಿದ್ದರೂ, ಆ ಹಣ ಪಡೆಯಲು ಈ ಕುಟುಂಬ ಪರದಾಡುವಂತಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ. ಬೆರಳಚ್ಚು, ಕಣ್ಣಿನ ಸಮಸ್ಯೆ ಹಾಗೂ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮಾಸಾಶನ ಸ್ಥಗಿತಗೊಳಿಸಿರುವ ಅಧಿಕಾರಿಗಳಿಗೆ, ಇಂತಹ ತೀವ್ರ ಅಂಗವೈಕಲ್ಯ ಹೊಂದಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಕನಿಷ್ಠ ಮಾನವೀಯತೆಯೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. 42 ವರ್ಷದ ಅಂಗವಿಕಲ ಮಗನಿಗೆ ಸಿಗಬೇಕಿರುವುದು ಕೇವಲ ₹1,400 ಮಾಸಾಶನ. ಆದರೆ ವೃದ್ಧ ಪೋಷಕರು ಮಗನನ್ನು ಹೆಗಲ ಮೇಲೆ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಪಾಲಿಗೆ ಮೂರು ವರ್ಷಗಳಾದರೂ ಬಗೆಹರಿಯದ ಇ-ಕೆವೈಸಿ ಸಮಸ್ಯೆ, ಕುಟುಂಬದ ಪಾಲಿಗೆ ಬದುಕಿನ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರಕ್ಕೆ ಸಾಧನಾ ಸಮಾವೇಶಗಳು ಹಾಗೂ ಸಚಿವರ ಬಂಗಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ ಒಬ್ಬ ಅಸಹಾಯಕ ಅಂಗವಿಕಲನಿಗೆ ತಿಂಗಳಿಗೆ ₹1,400 ಮಾಸಾಶನ ತಲುಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲವೇ? ಇದೇನಾ ನಿಮ್ಮ ಪ್ರಜಾಸೇವೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಅಂಗವಿಕಲರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದಲ್ಲ ಸರ್ಕಾರದ ಕೆಲಸ. ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯ. ಬಡವರು, ಅಂಗವಿಕಲರು ಮತ್ತು ವೃದ್ಧರ ಬದುಕಿಗೆ ಆಸರೆಯಾಗಬೇಕಾದ ಮಾಸಾಶನವನ್ನೇ ಹೀಗೆ ಸತಾಯಿಸಿ ಸ್ಥಗಿತಗೊಳಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜಪ್ಪ ಅವರ ಸ್ಥಗಿತಗೊಂಡಿರುವ ಮಾಸಾಶನವನ್ನು ಮರುಸ್ಥಾಪಿಸಿ, ಬಾಕಿ ಹಣ ಬಿಡುಗಡೆ ಮಾಡಬೇಕು. ಇಂತಹ ಅಸಹಾಯಕ ಫಲಾನುಭವಿಗಳಿಗೆ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು, ಅಸಹಾಯಕರ ಬದುಕಿನಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಅದೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತ ಎಂದು ಅವರು ಹೇಳಿದ್ದಾರೆ

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

November 6, 2026
r-ashoka-slams-congress-government-gruhalakshmi-guarantee-legal-right-karnataka

ಗ್ಯಾರಂಟಿ ಹಣ ಮಹಿಳೆಯರ ಕಾನೂನುಬದ್ಧ ಹಕ್ಕಲ್ಲ ಎಂದು ಕೋರ್ಟ್‌ಗೆ ಹೇಳಿದ ಕಾಂಗ್ರೆಸ್ ಸರ್ಕಾರ: ಆರ್. ಅಶೋಕ್ ಆಕ್ರೋಶ

November 6, 2026

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿರುವ ಜನರಿಗೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ಹಬ್ಬದ ಹೊಸ್ತಿಲಲ್ಲೇ ನಂದಿನಿ ತುಪ್ಪದ ಬೆಲೆಯನ್ನು ಲೀಟರ್‌ಗೆ ₹100ರಿಂದ ₹135ರವರೆಗೆ ಹೆಚ್ಚಿಸಲಾಗಿದೆ. ಬೆಣ್ಣೆ ಮತ್ತು ಪನ್ನೀರ್ ಬೆಲೆಯೂ ಏರಿಕೆಯಾಗಿದೆ. ಇದರ ಬೆನ್ನಲ್ಲೇ KSRTC ಬಸ್ ಪಾಸ್ ದರದಲ್ಲಿ ಶೇ.23 ಹಾಗೂ BMTC ಬಸ್ ಪಾಸ್ ದರದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಿರುವುದು ನಿತ್ಯ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಹೆಚ್ಚುವರಿ ಹೊರೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾದರಿ ಆಡಳಿತದ ಅಸಲಿ ಮುಖ ಈಗ ಅನಾವರಣಗೊಂಡಿದೆ. ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್ ಸೇರಿದಂತೆ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸಾರ್ವಜನಿಕ ಸಾರಿಗೆಯ ಬಸ್ ಪಾಸ್ ದರವೂ ಹೆಚ್ಚಳವಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಕೇಳಿದರೆ, ಅದು ಫಲಾನುಭವಿಗಳ ಕಾನೂನುಬದ್ಧ ಹಕ್ಕಲ್ಲ ಎಂದು ಸರ್ಕಾರವೇ ಹೈಕೋರ್ಟ್‌ನಲ್ಲಿ ವಾದಿಸುತ್ತಿದೆ. ಇದೇನಾ ಕಾಂಗ್ರೆಸ್‌ನ ಜನಪರ ಆಡಳಿತ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಒಂದು ಕೈಯಲ್ಲಿ ಉಚಿತಗಳ ಆಮಿಷವೊಡ್ಡಿ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಬರೆ ಎಳೆಯುವುದೇ ನಿಮ್ಮ ಜನಪರ ಆಡಳಿತವೇ? ಗ್ಯಾರಂಟಿಗಳ ವೆಚ್ಚದ ಹೊರೆಯನ್ನು ಜನರೇ ದುಬಾರಿ ಬದುಕಿನ ಮೂಲಕ ಭರಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದೀರಲ್ಲ, ಇದೇನಾ ನಿಮ್ಮ ಗ್ಯಾರಂಟಿ ಆಡಳಿತ ಎಂದು ಅವರು ಕಿಡಿಕಾರಿದ್ದಾರೆ.

ದೀಪಾವಳಿ ಜನರ ಬದುಕಿನಲ್ಲಿ ಬೆಳಕು, ಸಂತೋಷ ಮತ್ತು ಸಮೃದ್ಧಿ ತರಬೇಕಾದ ಹಬ್ಬ. ಆದರೆ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಜನಸಾಮಾನ್ಯರ ಹಬ್ಬದ ಖರ್ಚನ್ನೇ ಹೆಚ್ಚಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಏರುಪೇರಾಗಿದ್ದು, ಹಬ್ಬದ ಸಂಭ್ರಮಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದೆ ಎಂದು ಆಕ್ಷೇಪಿಸಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ಮತ ಪಡೆದು, ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಎಂದು ಪ್ರಶ್ನಿಸಿರುವ ಆರ್. ಅಶೋಕ್, ಜನರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಹೊರೆ ಹೇರುವುದನ್ನು ನಿಲ್ಲಿಸಬೇಕು. ಜನರ ಹಬ್ಬದ ಸಂಭ್ರಮವನ್ನು ಕಸಿಯದೆ, ಕೂಡಲೇ ಜನವಿರೋಧಿ ಬೆಲೆ ಏರಿಕೆ ನಿರ್ಧಾರಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ShareTweetSendShare
Join us on:

Related Posts

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ₹1,400 ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ತಮ್ಮ 42 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಹಾಯಕ ಕುಟುಂಬದ ಕಣ್ಣೀರು ಒರೆಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ತಾಲೂಕಿನ ಕನಕಾಪುರದ ರಾಜಪ್ಪ ಅವರ ಕುಟುಂಬದ ಗೋಳು ಹೃದಯ ವಿದ್ರಾವಕವಾಗಿದೆ. ಹುಟ್ಟಿನಿಂದಲೇ ಅಂಗವೈಕಲ್ಯ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 42 ವರ್ಷದ ಮಗನಿಗೆ ಸಿಗಬೇಕಾದ ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. 2010ರಿಂದ ನಿರಂತರವಾಗಿ ಬರುತ್ತಿದ್ದ ಮಾಸಾಶನವನ್ನು 2023ರಲ್ಲಿ ಸ್ಥಗಿತಗೊಳಿಸಲಾಗಿದೆ. ಅಂದು ₹1,000 ಇದ್ದ ಮಾಸಾಶನ ಇಂದು ₹1,400ಕ್ಕೆ ಏರಿಕೆಯಾಗಿದ್ದರೂ, ಆ ಹಣ ಪಡೆಯಲು ಈ ಕುಟುಂಬ ಪರದಾಡುವಂತಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ. ಬೆರಳಚ್ಚು, ಕಣ್ಣಿನ ಸಮಸ್ಯೆ ಹಾಗೂ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮಾಸಾಶನ ಸ್ಥಗಿತಗೊಳಿಸಿರುವ ಅಧಿಕಾರಿಗಳಿಗೆ, ಇಂತಹ ತೀವ್ರ ಅಂಗವೈಕಲ್ಯ ಹೊಂದಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಕನಿಷ್ಠ ಮಾನವೀಯತೆಯೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. 42 ವರ್ಷದ ಅಂಗವಿಕಲ ಮಗನಿಗೆ ಸಿಗಬೇಕಿರುವುದು ಕೇವಲ ₹1,400 ಮಾಸಾಶನ. ಆದರೆ ವೃದ್ಧ ಪೋಷಕರು ಮಗನನ್ನು ಹೆಗಲ ಮೇಲೆ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಪಾಲಿಗೆ ಮೂರು ವರ್ಷಗಳಾದರೂ ಬಗೆಹರಿಯದ ಇ-ಕೆವೈಸಿ ಸಮಸ್ಯೆ, ಕುಟುಂಬದ ಪಾಲಿಗೆ ಬದುಕಿನ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರಕ್ಕೆ ಸಾಧನಾ ಸಮಾವೇಶಗಳು ಹಾಗೂ ಸಚಿವರ ಬಂಗಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ ಒಬ್ಬ ಅಸಹಾಯಕ ಅಂಗವಿಕಲನಿಗೆ ತಿಂಗಳಿಗೆ ₹1,400 ಮಾಸಾಶನ ತಲುಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲವೇ? ಇದೇನಾ ನಿಮ್ಮ ಪ್ರಜಾಸೇವೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಅಂಗವಿಕಲರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದಲ್ಲ ಸರ್ಕಾರದ ಕೆಲಸ. ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯ. ಬಡವರು, ಅಂಗವಿಕಲರು ಮತ್ತು ವೃದ್ಧರ ಬದುಕಿಗೆ ಆಸರೆಯಾಗಬೇಕಾದ ಮಾಸಾಶನವನ್ನೇ ಹೀಗೆ ಸತಾಯಿಸಿ ಸ್ಥಗಿತಗೊಳಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜಪ್ಪ ಅವರ ಸ್ಥಗಿತಗೊಂಡಿರುವ ಮಾಸಾಶನವನ್ನು ಮರುಸ್ಥಾಪಿಸಿ, ಬಾಕಿ ಹಣ ಬಿಡುಗಡೆ ಮಾಡಬೇಕು. ಇಂತಹ ಅಸಹಾಯಕ ಫಲಾನುಭವಿಗಳಿಗೆ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು, ಅಸಹಾಯಕರ ಬದುಕಿನಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಅದೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತ ಎಂದು ಅವರು ಹೇಳಿದ್ದಾರೆ

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

by admin
November 6, 2026
0

ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ...

r-ashoka-slams-congress-government-gruhalakshmi-guarantee-legal-right-karnataka

ಗ್ಯಾರಂಟಿ ಹಣ ಮಹಿಳೆಯರ ಕಾನೂನುಬದ್ಧ ಹಕ್ಕಲ್ಲ ಎಂದು ಕೋರ್ಟ್‌ಗೆ ಹೇಳಿದ ಕಾಂಗ್ರೆಸ್ ಸರ್ಕಾರ: ಆರ್. ಅಶೋಕ್ ಆಕ್ರೋಶ

by admin
November 6, 2026
0

ಚುನಾವಣೆಗೂ ಮುನ್ನ ಮನೆ ಬಾಗಿಲಿಗೆ ತೆರಳಿ ಗ್ಯಾರಂಟಿ ಕಾರ್ಡ್ ಹಂಚಿದವರು ಈಗ ನ್ಯಾಯಾಲಯದ ಹಿಂದೆ ಅಡಗಿದ್ದಾರೆ; ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿದೆಯೇ?...

swiggy-anand-sweets-sugar-free-diwali-sweets-bengaluru-2026

ಆರೋಗ್ಯಕರ ದೀಪಾವಳಿಗೆ ಸ್ವಿಗ್ಗಿ-ಆನಂದ್ ಸ್ವೀಟ್ಸ್ ಸಾಥ್, ಬೆಂಗಳೂರಿಗರಿಗಾಗಿ ಬಂತು ‘ಶುಗರ್ ಫ್ರೀ’ ಸಿಹಿತಿಂಡಿ!

by admin
November 6, 2026
0

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿಗರಿಗೆ ಪ್ರಮುಖ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹಬ್ಬದಲ್ಲಿ ಸಿಹಿ ತಿನ್ನಲು ಆಸೆ ಇದ್ದರೂ, ಸಕ್ಕರೆ ಮತ್ತು...

premji-invests-investment-hical-technologies-bengaluru-rafael-isro

ರಫೇಲ್, ಇಸ್ರೋಗೆ ಬಿಡಿಭಾಗ ಪೂರೈಸುವ ಬೆಂಗಳೂರಿನ ‘ಹೈಕ್ಯಾಲ್‌’ನಲ್ಲಿ ಪ್ರೇಮ್‌ಜಿ ಇನ್‌ವೆಸ್ಟ್‌ನಿಂದ ಭಾರೀ ಹೂಡಿಕೆ

by admin
November 6, 2026
0

ಬೆಂಗಳೂರು: ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಬಿಡಿಭಾಗಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ 'ಹೈಕ್ಯಾಲ್‌ ಟೆಕ್ನಾಲಜೀಸ್', 'ಪ್ರೇಮ್‌ಜಿ ಇನ್‌ವೆಸ್ಟ್'ನಿಂದ 30 ರಿಂದ 40 ಮಿಲಿಯನ್ ಡಾಲರ್ (ಅಂದಾಜು...

dhanatrayodashi-kubera-mantra-dhanalakshmi-puja-deepavali-2026

ಧನ ತ್ರಯೋದಶಿಯ ಸಂಜೆ ಪಠಿಸಬೇಕಾದ ಕುಬೇರ ಮಂತ್ರ.

by admin
November 6, 2026
0

ದೀಪಾವಳಿ, ಅಲ್ಲವೇ? ಸಂಜೆ ಮಾರ್ವಾಡಿಗಳು ಈ ಲಕ್ಷ್ಮೀ ಕುಬೇರ ಪೂಜೆಯನ್ನು ಬಹಳ ವಿಮರ್ಶಾತ್ಮಕವಾಗಿ ನೆರವೇರಿಸುತ್ತಾರೆ. ನಮ್ಮ ಮನೆಯಲ್ಲಿ ಲಕ್ಷ್ಮೀ ಕುಬೇರ ಪೂಜೆಯನ್ನು ಅತ್ಯಂತ ವಿಮರ್ಶಾತ್ಮಕವಾಗಿ ಮಾಡುವುದಾಗಲಿ ಅಥವಾ ಕುಬೇರನನ್ನು ಅತ್ಯಂತ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram