ಆರ್. ಅಶ್ವಿನ್ ವರ್ಸಸ್ ಬೆನ್ ಸ್ಟೋಕ್ಸ್… ಅಶ್ವಿನ್ ಟಾರ್ಗೆಟ್ ಬೆನ್ ಸ್ಟೋಕ್ಸ್..?
ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಸವಾರಿ ನಡೆಸಿದ್ದ ಟೀಮ್ ಇಂಡಿಯಾಗೆ ತವರಿನಲ್ಲಿ ಆಂಗ್ಲರು ಸವಾಲು ಒಡ್ಡಲಿದ್ದಾರೆ. ಕ್ರಿಕೆಟ್ ಜನಕರ ವಿರುದ್ಧದ ಟೆಸ್ಟ್ ಸರಣಿ ಹೈ ವೋಲ್ಟೇಜ್ ಪಡೆದುಕೊಂಡಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ತಯಾರಿ ಕೂಡ ನಡೆಸಿವೆ. ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಸರಣಿ ಗೆದ್ದು ಟೀಮ್ ಇಂಡಿಯಾವನ್ನು ಮಣಿಸುವ ವಿಶ್ವಾಸದಲ್ಲಿದೆ. ಅದೇ ರೀತಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿದೆ.
ಅಂದ ಹಾಗೇ ಈ ಟೆಸ್ಟ್ ಸರಣಿಯಲ್ಲಿ ಜಿದ್ದಾಜದ್ದಿನ ಫೈಟ್ ನಡೆಯಲಿದೆ. ಮುಖ್ಯವಾಗಿ ಟೀಮ್ ಇಂಡಿಯಾಗೆ ಆರ್. ಅಶ್ವಿನ್ ಟ್ರಂಪ್ ಕಾರ್ಡ್ ಬೌಲರ್ ಆಗಲಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಕನಸಿನಲ್ಲೂ ಕಾಡಿದ್ದ ಅಶ್ವಿನ್ ಅವರ ಮುಂದಿನ ಟಾರ್ಗೆಟ್ ಬೆನ್ ಸ್ಪೋಕ್ಸ್. ಬೆನ್ ಸ್ಟೋಕ್ಸ್ ಅಪಾಯಕಾರಿ ಬ್ಯಾಟ್ಸ್ ಮೆನ್ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅಶ್ವಿನ್ ಸ್ಟೋಕ್ಸ್ ಅವರನ್ನು ಕಟ್ಟಿ ಹಾಕಲು ಪ್ಲಾನ್ ಮಾಡುತ್ತಿದ್ದಾರೆ. ಆಸೀಸ್ ಸರಣಿಯಲ್ಲಿ ಆರ್. ಅಶ್ವಿನ್ ಅವರು, ಆಡಿರುವ ಮೂರು ಪಂದ್ಯಗಳಲ್ಲಿ 2.57ರ ಸರಾಸರಿಯಲ್ಲಿ 12 ವಿಕೆಟ್ ಗಳನ್ನು ಕಬಳಿಸಿದ್ದಾರೆ. 55ಕ್ಕೆ 4 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಆರ್. ಅಶ್ವಿನ್ – 2020-21
ಪಂದ್ಯಗಳು – 3
ವಿಕೆಟ್ ಗಳು 12
ಶ್ರೇಷ್ಠ ಸಾಧನೆ – 4/55
ಸರಾಸರಿ – 2.57
ಇನ್ನು ಆರ್. ಅಶ್ವಿನ್ ಅವರು ಸ್ಟೀವ್ ಸ್ಮಿತ್ ಅವರನ್ನು ಕಾಡಿದ್ದ ಪರಿ ಮಾತ್ರ ಅದ್ಭುತವಾಗಿತ್ತು.
ಅಶ್ವಿನ್ ವರ್ಸಸ್ ಸ್ಟೀವ್ ಸ್ಮಿತ್
ಎಸೆತಗಳು -224
ರನ್ ಗಳು – 64
ಔಟಾಗಿದ್ದು – ಮೂರು ಬಾರಿ
ಸರಾಸರಿ – 21.33
ಸ್ಟ್ರೈಕ್ ರೇಟ್ – 51.01
ಸ್ಟೀವ್ ಸ್ಮಿತ್ ಅವರು ಅಶ್ವಿನ್ ಅವರ 124 ಎಸೆತಗಳಲ್ಲಿ 64 ರನ್ ನೀಡಿದ್ದಾರೆ. ಹಾಗೇ ಮೂರು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಸರಾಸರಿ 21.33 ಹಾಗೂ ಸ್ಟ್ರೈಕ್ ರೇಟ್ 51.01. ಅಂದ ಹಾಗೇ ಸ್ಮಿತ್ ಆಸ್ಟ್ರೇಲಿಯಾ ನೆಲದಲ್ಲಿ ಸ್ಮಿತ್ ಸ್ಪಿನ್ನರ್ ಗೆ ಒಪ್ಪಿಸಿರಲಿಲ್ಲ.
ಇದೀಗ ಅಶ್ವಿನ್ ಅವರ ಟಾರ್ಗೆಟ್ ಬೆನ್ ಸ್ಟೋಕ್ಸ್. ಭಾರತದಲ್ಲಿ ಬೆನ್ ಸ್ಟೋಕ್ಸ್ ಅಶ್ವಿನ್ ವಿರುದ್ಧ ಅಷ್ಟೊಂದು ಪ್ರಾಬಲ್ಯ ಸಾಧಿಸಿಲ್ಲ ಅಂತ ಅಂಕಿ ಅಂಶಗಳು ಹೇಳುತ್ತವೆ.
ಭಾರತದಲ್ಲಿ ಅಶ್ವಿನ್ ಮತ್ತು ಬೆನ್ ಸ್ಟೋಕ್ಸ್
ಎಸೆತಗಳು – 228
ರನ್ ಗಳು – 101
ಔಟಾಗಿದ್ದು – 5 ಬಾರಿ
ಸರಾಸರಿ 20.20
ಸ್ಟ್ರೈಕ್ ರೇಟ್ – 44.30
ಭಾರತದಲ್ಲಿ ಅಶ್ವಿನ್ ಅವರು ಬೆನ್ ಸ್ಟೋಕ್ಸ್ ಗೆ 228 ಎಸೆತಗಳನ್ನು ಹಾಕಿದ್ದಾರೆ. ಇದ್ರಲ್ಲಿ ರನ್ ದಾಖಲಾಗಿರುವುದು 101 ಮಾತ್ರ. ಹಾಗೇ ಅಶ್ವಿನ್ ಗೆ ಐದು ಬಾರಿ ಸ್ಟೋಕ್ಸ್ ಔಟಾಗಿದ್ದಾರೆ. ಸರಸಾರಿ 20.20 ಹಾಗೂ ಸ್ಟ್ರೈಕ್ ರೇಟ್ 44.30
ಆಫ್ ಸ್ಪಿನ್ನರ್ ಗಳ ಎದುರು ಬೆನ್ ಸ್ಟೋಕ್ಸ್ ದಾಖಲೆ
ಬೌಲರ್ – ಔಟಾಗಿದ್ದು
ಆರ್. ಅಶ್ವಿನ್ – 7
ನಥಾನ್ ಲಿಯಾನ್ -6
ಪೆರೇರಾ -5
ಇನ್ನೊಂದೆಡೆ ಬೆನ್ ಸ್ಟೋಕ್ಸ್ ಅವರು ಆಫ್ ಸ್ಪಿನ್ನರ್ ಗಳ ವಿರುದ್ಧ ಎಡವಿದ್ದು ಜಾಸ್ತಿನೇ ಇದೆ ಅಂತ ಅಂಕಿ ಅಂಶಗಳು ಹೇಳುತ್ತವೆ. ಅದ್ರಲ್ಲೂ ಅಶ್ವಿನ್ ಗೆ ಏಳು ಬಾರಿ ಔಟಾಗಿದ್ರೆ, ಲಿಯಾನ್ ಗೆ ಆರು ಬಾರಿ ಹಾಗೂ ಲಂಕಾದ ಪೆರೇರಾಗೆ ಐದು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಆಶ್ವಿನ್ ಮತ್ತು ಬೆನ್ ಸ್ಟೋಕ್ಸ್ ನಡುವಿನ ಹೋರಾಟ ಈ ಟೆಸ್ಟ್ ಸರಣಿಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel