ಐಪಿಎಲ್ 2025 ಮೆಗಾ ಹರಾಜಿನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಬ್ಯಾಟರ್ ರಚಿನ್ ರವೀಂದ್ರ ಚೆನ್ನೈ ಪಾಲಾಗಿದ್ದಾರೆ.
ಆರ್.ಅಶ್ವಿನ್ 9.75 ಕೋಟಿ ಮತ್ತು ರಚಿನ್ 4 ಕೋಟಿಗೆ ಬಿಡ್ ಆಗಿದ್ದಾರೆ. ತಮ್ಮ ಚೊಚ್ಚಲ IPL ಋತುವಿನಲ್ಲಿ, ರಚಿನ್ 10 ಪಂದ್ಯಗಳಲ್ಲಿ 222 ರನ್ ಗಳಿಸಿದ್ದಾರೆ. ರಚಿನ್, ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಭಾವ ಬೀರಿದ್ದರು. ಸರಣಿಯಲ್ಲಿ ಶತಕ ಬಾರಿಸಿದ ಇಬ್ಬರು ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದರು.
2008 ರಿಂದ 2015 ರ ವರೆಗೆ ತಾವು ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಅಶ್ವಿನ್ ಮರಳಿದ್ದಾರೆ. 2008 ರಲ್ಲಿ ಸಿಎಸ್ಕೆ ಐಪಿಎಲ್ನಲ್ಲಿ 211 ಪಂದ್ಯಗಳಲ್ಲಿ ಅಶ್ವಿನ್ 180 ವಿಕೆಟ್ ಗಳನ್ನು ಕಬಳಿಸಿದ್ದಾರೆ ಮತ್ತು 800 ರನ್ ಗಳಿಸಿದ್ದಾರೆ.








