ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಾಟ, ಡ್ರಗ್ಸ್ ಘಾಟಿನ ಮಧ್ಯೆ ಉಪ ಚುನಾವಣೆ (R.R. Nagar by Election) ಕಣ ರಂಗೇರಿದೆ. ಅದರಲ್ಲೂ ರಾಜರಾಜೇಶ್ವರಿ ನಗರ (R.R. Nagar by Election) ವಿಧಾನಸಭಾ ಕ್ಷೇತ್ರದ ಚುನಾವಣೆ ಮೇಲೆ ಎಲ್ಲರ ಗಮನ ನೆಟ್ಟಿದೆ. ಯಾಕೆಂದ್ರೆ ಕಾಂಗ್ರೆಸ್ ನಿಂದ ಡಿ.ಕೆ.ರವಿ ಪತ್ನಿ ಕುಸುಮ ಕಣಕ್ಕಿಳಿದ್ದು, ಬಿಜೆಪಿಯಿಂದ ಯಾರು ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಕೊಟ್ಟ ಮಾತು ಈಡೇರಿಸಲು ಸಿಎಂ ಸರ್ಕಸ್
ಮೈತ್ರಿ ಸರ್ಕಾರ ಪತನದ ವೇಳೆ ಬಿಜೆಪಿ ಸೇರಿದ್ದ ಮುನಿರತ್ನಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಪಕ್ಷದ ಟಿಕೆಟ್, ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದರು.
ಹೀಗಾಗಿ ಆರ್ ಆರ್ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಮುನಿರತ್ನಗೆ ಪಕ್ಷದ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ : ಅ.25ಕ್ಕೆ `ಕೈ’ ಹಿಡಿಯಲಿದ್ದಾರೆ ಶರತ್
ಆದ್ರೆ ಮೂಲ ಬಿಜೆಪಿಗರು ಇದಕ್ಕೆ ಸುತಾರಂ ಒಪ್ಪುತ್ತಿಲ್ಲ. ಸ್ಥಳಿಯ ಮಟ್ಟದಿಂದ ಪಕ್ಷವನ್ನು ಕಟ್ಟಿದ ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದ ಪಿ.ಮುನಿರಾಜು ಗೌಡ ಅವರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಏರುತ್ತಿದ್ದಾರೆ.
ಹೀಗಾಗಿ ಅಂತಿಮವಾಗಿ ಟಿಕೆಟ್ ಯಾರ ಪಾಲಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಗೆ ಇಬ್ಬರು ಹೆಸರುಗಳನ್ನು ಶಿಪಾರಸ್ಸು ಮಾಡಿದ್ದು, ಭಾರಿ ವಿರೋಧಕ್ಕೆ ಕಾರಣವಾಗಿದೆ.
ಕಳೆದ ವರ್ಷ ಬಿಜೆಪಿಗೆ ವಲಸೆ ಬಂದ ನಾಯಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್” ಬಿಜೆಪಿ ಸರ್ಕಾರಕ್ಕಾಗಿ ಮುನಿರತ್ನ ತ್ಯಾಗ ಮಾಡಿದ್ದಾರೆ.
ಇದನ್ನೂ ಓದಿ : ನಮ್ಮ ಶಾಸಕರು ಪಕ್ಷದಿಂದ ಹೊರಹೋಗಲು `ಕೈ’ವಾಡ ಕಾರಣ : ಹೆಚ್.ಡಿ.ಕುಮಾರಸ್ವಾಮಿ
ಅವರಿಗೆ ಪಕ್ಷದ ಟಿಕೆಟ್ ಕೊಡ್ಲೇಬೇಕೆ. ಹೈಕಮಾಂಡ್ ಗೆ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಸರಿಯಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಇದೇ ವಿಚಾರವಾಗಿ ನಿನ್ನೆ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.