ಹೊಸಕೋಟೆ : ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಕೈ ಬಿಟ್ಟು ಕಮಲ ಹಿಡಿದ ಎಂಟಿಬಿ ನಾಗರಾಜ್ ಎದುರು ಭರ್ಜರಿ ಜಯ ಸಾಧಿಸಿದ ಶರತ್ ಬಚ್ಚೇಗೌಡ(Sharath Bachegowda) ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 25 ರಂದು ಶರತ್ ಬಚ್ಚೇಗೌಡ(Sharath Bachegowda) ಅವರು ಕಾಂಗ್ರೆಸ್ ಬಾವುಟ ಹಿಡಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಶರತ್ ಬಚ್ಚೇಗೌಡ ಗೆದ್ದ ಬಳಿಕ ಜೆಡಿಎಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದ್ರೆ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಶರತ್ ಬಚ್ಚೇಗೌಡರು ಕಾಂಗ್ರೆಸ್ ಸೇರೋದು ಪಕ್ಕಾ ಎಂಬ ಮಾಹಿತಿ ಹೊರಬಂತು.
ಇದನ್ನೂ ಓದಿ : ನಮ್ಮ ಶಾಸಕರು ಪಕ್ಷದಿಂದ ಹೊರಹೋಗಲು `ಕೈ’ವಾಡ ಕಾರಣ : ಹೆಚ್.ಡಿ.ಕುಮಾರಸ್ವಾಮಿ
ಅಲ್ಲದೆ ಕಾಂಗ್ರೆಸ್ ಪಕ್ಷ ಸೇರಲು ಒಲವು ತೋರಿಸಿದ್ದ ಶರತ್ ಬಚ್ಚೇಗೌಡರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆದ್ರೆ ಕಾಂಗ್ರೆಸ್ ಸೇರಲು ಶರತ್ ಬಚ್ಚೇಗೌಡರಿಗೆ ಕೊರೊನಾ ಅಡ್ಡಿ ಆಗಿತ್ತು.
ಇನ್ನು ಶರತ್ ಬಚ್ಚೇಗೌಡರು ಕಾಂಗ್ರೆಸ್ ಸೇರುವ ಕಾರ್ಯಕ್ರಮ ಹೊಸಕೋಟೆಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತಿ ಇರಲಿದ್ದಾರೆ.
ಇದನ್ನೂ ಓದಿ : ರಾಮುಲುಗೆ 100 ಕೋಟಿ ರೂ. ಮನೆ ಕಟ್ಟೋಕೆ ಹಣ ಎಲ್ಲಿಂದ ಬಂತು : ಎಸ್.ಆರ್. ಹಿರೇಮಠ
ಹಾಗೇ ಶರತ್ ಬಚ್ಚೇಗೌಡರು ತಮ್ಮ ಅಪಾರ ಸ್ವಾಭಿಮಾನಿ ಬೆಂಬಲಿಗರ ಸಮ್ಮುಖದಲ್ಲಿ ಕೈ ಬಾವುಟ ಹಿಡಿಯಲಿದ್ದಾರೆ