ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆ ರಂಗೇರಿದ್ದು, ಇಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಮಧ್ಯೆ ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಮೂಲ ಬಿಜೆಪಿ ನಾಯಕರು( bjp activists ) ಸಿಡಿದೆದ್ದಿದ್ದಾರೆ.
ಆರ್ ಆರ್ ನಗರದ ಮೂಲ ಬಿಜೆಪಿಗರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬೋಲೋ ಭಾರತ್ ಮಾತಾ ಕೀ ಜೈ ಹೆಸರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ನಗರದ ಕೆಂಗುಂಟೆ ಬಳಿಯ ಪ್ರೌಢಶಾಲೆ ಬಳಿ ಈ ಸಭೆ ನಡೆದಿದ್ದು, ಸುಮಾರು 200 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಆರ್.ಆರ್. ನಗರ ಉಪ ಕದನ : ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ
ಇನ್ನು ಈ ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್, ಈ ಹಿಂದೆ ಮುನಿರತ್ನ ವೋಟ್ ಹಗರಣದಲ್ಲಿ ಭಾಗಿಯಾಗಿದ್ದರು.
ಆಗ ಅವರ ವಿರುದ್ಧ ನಾವೇ ಮಾತನಾಡಿದ್ದೇವೆ. ಈಗ ಅವರ ಪರ ಕೆಲಸ ಮಾಡಿದರೆ, ಜನ ನಮ್ಮನ್ನು ಏನೆಂದುಕೊಳ್ತಾರೆ.

ಹೀಗಾಗಿ ನಾವು ಮುನಿರತ್ನ ಪರ ಪ್ರಚಾರ ಮಾಡೋದು ಬೇಡ. ಅವರ ಪರ ಕೆಲಸ ಮಾಡಲು ನಾವು ಸಿದ್ಧರಿಲ್ಲ. ಇಷ್ಟು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆರ್.ಆರ್. ನಗರ ಬೈ ಎಲೆಕ್ಷನ್ : ಕೈ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








