Sandalwood – “ಮ್ಯಾಟ್ನಿ” ಮೂಲಕ ಮತ್ತೆ ಒಂದಾದ ಸತೀಶ್ – ರಚ್ಚು ಜೋಡಿ….
ಅಯೋಗ್ಯ ಸಿನಿಮಾ ಮೂಲಕ ಹಿಟ್ ಚಿತ್ರ ಕೊಟ್ಟಿದ್ದ ರಚಿತಾ ರಾಮ್ ಮತ್ತು ಸತಿಶ್ ನಿನಾಸಂ ಜೊಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಒಂದಾಗಿದೆ. “ಮ್ಯಾಟ್ನಿ” ಚಿತ್ರದ ಮೂಲಕ ಸ್ಯಂಡಲ್ವಡ್ ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಈ ಜೋಡಿ ಒಂದಾಗಿದೆ. ಸದ್ಯ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಚಿತ್ರ ತಂಡ ಪ್ರೇಮಿಗಳ ದಿನಕ್ಕೆ ಟೀಸರ್ ಉಡುಗೊರೆ ನೀಡಿದೆ.
ಪ್ರೇಮಿಗಳಿಗೆ ಗಿಫ್ಟ್ ಎನ್ನುವಂತೆಯೇ ಕಲರ್ ಫುಲ್ ಸೆಟ್ ನಲ್ಲಿ ಕಣ್ಣಿಗೆ ಹಬ್ಬ ಎನಿಸುವಂತಹ ಲುಕ್ ಸುಂದರವಾದ ಬ್ಯಾಗ್ರೌಂಡ್ ಕಿವಿಗೆ ಇಂಪು ಕೊಡೋ ಸಂಗೀತ ಎಲ್ಲವೂ ಈ ಟೀಸರ್ ನಲ್ಲಿದೆ. ಪ್ರೀಮಿಗಳಿಗೆ ಹೇಳಿ ಮಾಡಿಸಿದಂತಹ ಕಣ್ಮನ ಸೆಳೆಯುವ ಮ್ಯಾಟ್ನಿ ನೋಡಲು ಸಿದ್ಧವಾಗಿದೆ. rachita ram and satish ninasam acted matni movie teaser out
ಎಫ್ 3 ಬ್ಯಾನರ್ ಅಡಿಯಲ್ಲಿ ಪಾರ್ವತಿ ಎಸ್ ಗೌಡ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದು ಸುಧಾಕರ್ ಸಿನಿಮಾಟೋಗ್ರಫಿ ಇದೆ. ಮೂರು ಹಂತದ ಚಿತ್ರೀಕರಣ ಮುಗಿದಿದ್ದು ನಾಲ್ಕನೇ ಶೆಡ್ಯೂಲ್ ಕಂಪ್ಲೀಟ್ ಮಾಡಿ ತೆರೆಗೆ ಬರುವುದು ಚಿತ್ರ ತಂಡದ ಪ್ಲಾನ್ . ಅಯೋಗ್ಯ ನಂತರ ಮತ್ತೊಮ್ಮೆ ಈ ಜೋಡಿ ಹಿಟ್ ಕೊಡಲಿ ಎನ್ನುವುದು ಎಲ್ಲರ ಆಶಯ..