ಇತ್ತೀಚಿಗಷ್ಟೆ ಮದುವೆ ವಿಚಾರವಾಗಿ ಸದ್ದು ಮಾಡಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ಸಿಗರೇಟ್ ಸೇದಿ ಸುದ್ದಿಯಾಗಿದ್ದಾರೆ. ರಚಿತಾ ರಾಮ್ ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ರಚ್ಚು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಆಗಾದ್ರೆ ಡಿಂಪಲ್ ಕ್ವೀನ್ ಅವರಿಗೆ ಸಿಗರೇಟ್ ಅಭ್ಯಾಸ ಇದೆ ಅನ್ಕೋಬೇಡಿ, ಅವರು ಸಿಗರೇಟ್ ಹಿಡಿದಿರುವುದು ಏಕ್ ಲವ್ ಯಾ ಸಿನಿಮಾಗಾಗಿ.
ಅಂದ್ಹಾಗೆ ರಚಿತಾ ರಾಮ್ ಅವರ ಕೈಗೆ ಸಿಗರೇಟು ಕೊಟ್ಟಿರೋದು ನಿರ್ದೇಶಕ ಪ್ರೇಮ್. ಏಕ್ ಲವ್ ಯಾ ಸಿನಿಮಾಗಾಗಿ ರಚಿತಾ ಸಿಗರೇಟು ಸೇದಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದ ಮೂಲಗಳು ತಿಳಿಸಿವೆ. ಇನ್ನು ವಿಶೇಷ ಅಂದರೆ ಚಿತ್ರದಲ್ಲಿ ರಚಿತಾ ಲಿಪ್ ಲಾಕ್ ದೃಶ್ಯದಲ್ಲಿಯೂ ಕಾಣಿಸಿಕೊಂಡಿದ್ದಾರಂತೆ.