ರಾಧಾ ರಮಣದ ಕ್ಯೂಟ್ ನಟಿ ಕಾವ್ಯಾ ಗೌಡ ತಮ್ಮ ಪ್ರಿಯತಮನನ್ನ ಪರಿಚಯಿಸಿದ್ದಾರೆ..!

1 min read

ರಾಧಾ ರಮಣದ ಕ್ಯೂಟ್ ನಟಿ ಕಾವ್ಯಾ ಗೌಡ ತಮ್ಮ ಪ್ರಿಯತಮನನ್ನ ಪರಿಚಯಿಸಿದ್ದಾರೆ..!

ಬೆಂಗಳೂರು : ರಾಧಾ ರಮಣ ಧಾರಾವಾಹಿಯ ಕ್ಯೂಟ್ ಅಂಡ್ ಗ್ಲಾಮರಸ್ ನಟಿ ಕಾವ್ಯಾ ಗೌಡ ಅವರು ತಮ್ಮ ಪ್ರಿಯಕರನನ್ನ ಅಧಿಕೃತವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಬಾಯಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿ ಧೀರ್ಘವಾಗಿ ಆತನ ಬಗ್ಗೆ ತಮ್ಮ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾರೆ.

ಅಂದ್ಹಾಗೆ ತುಂಬಾ ಸುಂದರವಾದ ದುಬೈನಲ್ಲಿ ಶೂಟ್ ಮಾಡಿಸಿರುವ ಫೋಟೋಗಳನ್ನ ಹಂಚಿಕೊಂಡಿದ್ದು, ಎಲ್ಲರಿಗೂ ಸಪ್ರ್ರೈಸ್ ನೀಡಿದ್ದಾರೆ. ಅಲ್ಲದೇ ಈ ನಟಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ನಿನ್ನೊಂದಿಗೆ ನನ್ನ ಹೊಸ ಜೀವನ ಶುರು ಮಾಡಲು ನಾನು ಕಾಯುತ್ತಿದ್ದೇನೆ. ನಿನ್ನ ಜೊತೆಗೆ ಕಳೆದ ಕ್ಷಣಗಳು ನನ್ನ ಜೀವನದ ಸುಂದರ ಕ್ಷಣಗಳಾಗಿವೆ. ನಿನ್ನಂತಹ ಉತ್ತಮ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ.

ನಿನ್ನ ಮುಗ್ಧತೆ, ತಾಳ್ಮೆ, ಪ್ರೀತಿ, ಕಾಳಜಿ ಎಲ್ಲ ನೋಡಿದರೆ ನಾನು ವಿಶ್ವದ ತುತ್ತತುದಿಯಲ್ಲಿದ್ದೇನೆ ಅಂತ ಅನಿಸತ್ತೆ. ನೀನು ಉತ್ತಮ ವ್ಯಕ್ತಿ. ನಾನು ಕಣ್ಣು ಮುಚ್ಚಿಯೂ ನಿನ್ನ ಜೊತೆಗೆ ಜೀವನ ಕಳೆಯುತ್ತೇನೆ ಅಂತ ನಂಬಿಕೆಯಿದೆ.

ನನ್ನ ಜೀವನವನ್ನು ಇನ್ನಷ್ಟು ಸುಂದರ ಮಾಡಿರೋದಕ್ಕೆ, ವರ್ಣಮಯ ಮಾಡಿರೋದಕ್ಕೆ ಧನ್ಯವಾದಗಳು. ನಿನ್ನ ಜೊತೆಗೆ ಪ್ರತಿಕ್ಷಣ ಇರುತ್ತೇನೆ ಅಂತ ವಚನ ನೀಡುತ್ತೇನೆ.

ನಿನ್ನ ಕನಸಿಗಾಗಿ ನಾನು ಕೂಡ ಹೋರಾಡುವೆ. ನಿನ್ನ ಹಾದಿಯಲ್ಲಿ ಏನು ಬರತ್ತೆ ಅನ್ನೋದು ಮುಖ್ಯವಲ್ಲ, ನಾನು ನಿನ್ನ ಪರ ನಿಂತುಕೊಳ್ಳುವೆ. ನಾನು ಸಾಯಿ ಬಾಬಾರನ್ನು ನಂಬುತ್ತೇನೆ, ಅವರು ಎಂದಿಗೂ ನನ್ನನ್ನು ಕೆಳಗೆ ಬೀಳಲು ಬಿಡಲ್ಲ.

ಜೀವನದಲ್ಲಿ ಏನಾದರೂ ಉತ್ತಮವಾಗಿರೋದು ಸಿಗೋಕೆ ಕಾಯಬೇಕಂತೆ ಅಂತ ಹೇಳ್ತಾರೆ. ನೀನು ಸಿಗುವ ತನಕ ನಾನು ಕಾದಿರುವುದಕ್ಕೆ ಖುಷಿಯಿದೆ. ಇಂತಹ ಅದ್ಭುತ ವ್ಯಕ್ತಿ ಭೇಟಿ ಮಾಡೋಕೆ ಅವಕಾಶ ನೀಡಿದ ಜಗತ್ತಿಗೆ ಧನ್ಯವಾದಗಳು.

ಜಗತ್ತು ನೀಡಿದ ದೊಡ್ಡ ಉಡುಗೊರೆ ನೀನು. ನಿನ್ನ ಜೊತೆ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಾಯಿಬಾಬಾಗೆ ಯಾವಾಗಲೂ ನಾನು ಋಣಿಯಾಗಿರುವೆ ಎಂದು ಬರೆದುಕೊಂಡು ಅಭಿಮಾನಿಗಳ ಗಮನ ಸೆಲೆದಿದ್ಧಾರೆ.

ಕೊರೊನಾ ಪರಿಸ್ಥಿತಿಯನ್ನ ದಯವಿಟ್ಟು ಲಘುವಾಗಿ ಪರಿಗಣಿಸಬೇಡಿ -ಅನಿರುದ್ಧ

ಬದಲಾದ ಸಮಯದಲ್ಲಿ ಬರಲಿದೆ ಕಿರುತೆರೆಯ ‘ಮಹಾನಾಯಕ’..!

ಇವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು : ಜಗ್ಗೇಶ್ ಆಕ್ರೋಶ

ಸಮಯ ನಿಜವಾಗಿಯೂ ಕಳೆದು ಹೋಗುತ್ತದೆ – ಹಳೆಯ ಚಿತ್ರದ ಜೊತೆಗೆ ಸಚಿನ್ ಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದ ಕರಿಷ್ಮಾ ಕಪೂರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd