‘ರಾಧೆಶ್ಯಾಮ್’ ‘ಸಂಚಾರಿ’ ಹಾಡು ರಿಲೀಸ್ : ಪಕ್ಕಾ ಲವರ್ ಬಾಯ್ ಆದ ‘ಬಾಹುಬಲಿ’..!
ಬಾಹುಬಲಿ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಟಾಲಿವುಡ್ ನ ಡಾರ್ಲಿಂಗ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ರಾಧೆ ಶ್ಯಾಮ್” ಶೀಘ್ರವೇ ರಿಲೀಸ್ ಆಗಬೇಕಿದೆ.. ಈ ನಡುವೆ ಸಿನಿಮಾದ ಹಾಡುಗಳನ್ನ ರಿಲೀಸ್ ಮಾಡುತ್ತಾ , ಟೀಸರ್ ರಿಲಿಸ್ ಮಾಡಿ ಅಭಿಮಾನಿಗಳ ಕಾತರತೆಯನ್ನ ಸಿನಿಮಾ ತಂಡವು ಮತ್ತಷ್ಟು ಹೆಚ್ಚಿಸುತ್ತಿದೆ.. ಈ ನಡುವೆ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ಸಂಚಾರಿ ಟೈಟಲ್ ನ ಹಾಡು ತುಂಬಾ ಇಂಪಾಗಿದ್ದು, ಲೊಕೇಶನ್ಸ್ ಮಸ್ತ್ ಆಗಿದೆ.. ಮ್ಯೂಸಿಕ್ ಅಮೇಜಿಂಗ್ ಅಂತಿದ್ದಾರೆ ನೆಟ್ಟಿಗರು..
ಸಂಚಾರಿ.. ಹೆಸರಿಗೆ ತಕ್ಕಂತೆ ಹಾಡು ಪೂರ ಪ್ರಭಾಸ್ ಸಂಚಾರಿಯಂತೆಯೇ ಸಂಚರಿಸುತ್ತಾ , ಹೊಸ ಹೊಸ ಅನುಭವಗಳ ಜೊತೆಗೆ ಹೋಗುತ್ತಿರುವುದು ಕಂಡು ಬರುತ್ತೆ..
ಬಾಹುಬಲಿಯಲ್ಲಿ ಪಕ್ಕಾ ಮಾಸ್ ಆಗಿ ಆಕ್ಷನ್ ಸೀನ್ ಗಳ ಮೂಲಕವೇ ಗಮನ ಸೆಲೆದಿದ್ದ ಪ್ರಬಾಸ್ ಈ ಸಿನಿಮಾದಲ್ಲಿ ಕಂಪ್ಲೀಟ್ ಲವರ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಕುತೂಹಲವನ್ನ ಹೆಚ್ಚಿಸುತ್ತಿದೆ.. ಜಸ್ಟಿನ್ ಪ್ರಭಾಕರನ್ ಸಂಯೋಜಿಸಿರುವ ಹಾಡಿಗೆ ಅನಿರುಧ್ ರವಿಚಂದರ್ ಧ್ವನಿಯಾಗಿದ್ದಾರೆ.. ಕೃಷ್ಣಕಾಂತ್ ಸಾಹಿತ್ಯವಿದೆ.. ಯುವಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ರೆ , ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನವಿದೆ..