ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ‘ರಾಧೆ-ಶ್ಯಾಂ’ ಸಿನಿಮಾದ ಟೀಸರ್ ಇದೇ ಫೆಬ್ರವರಿ 14 ಅಂದ್ರೆ ವ್ಯಾಲೆಂಟೈನ್ಸ್ ಡೇಗೆ ರಿಲೀಸ್ ಆಗಲಿದೆ. ಇನ್ನೂ ಈ ಸುದ್ದಿಯನ್ನ ಘೋಷಣೆ ಮಾಡಿರೋ ಸಿನಿಮಾತಂಡ ಅಭಿಮಾನಿಗಳಿಗೆ ಮತ್ತೊಂದು ಖುಷಿ ನಿಡಿದೆ. ಅದೇನೆಂದ್ರೆ ‘ಪ್ರೀ ಟೀಸರ್’ ಒಂದನ್ನ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಹೌದು, ಟೀಸರ್ ಬಿಡುಗಡೆಗೂ ಮುನ್ನ ‘ಪ್ರೀ ಟೀಸರ್’ ಬಿಡುಗಡೆ ಆಗಿದ್ದು, ‘ರಾಧೆ-ಶ್ಯಾಂ’ ಸಿನಿಮಾದ ಪ್ರಭಾಸ್ ಪಾತ್ರದ ಕೆಲವೇ ಸೆಕೆಂಡುಗಳ ಸಣ್ಣ ತುಣುಕನ್ನು ಈ ಪ್ರೀ ಟೀಸರ್ ಒಳಗೊಂಡಿದೆ. ಬಾಹುಬಲಿ, ಸಾಹೊ ಸಿನಿಮಾಗಳಲ್ಲಿ ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ, ಆಕ್ಷನ್ ನೋಡಿದ್ದೀರಿ. ‘ರಾಧೆ-ಶ್ಯಾಂ’ ಸಿನಿಮಾದಲ್ಲಿ ಪ್ರಭಾಸ್ ನ ಹೃದಯ ನೋಡುತ್ತೀರಿ ಎಂದು ಪ್ರೀ ಟೀಸರ್ ನಲ್ಲಿ ಹೇಳಲಾಗಿದೆ. ಟೈಟಲ್ ಕ್ಯಾಪ್ಷನ್ ಸಾಂಗ್, ಪೋಸ್ಟರ್ ಲೊಕೇಶನ್ಸ್, ಹೇಳೋ ಹಾಗೆ ಇದೊಂದು ಪಕ್ಕಾ ಲವ್ ಸ್ಟೋರಿಯಾಗಿದ್ದು, ವೀರಬಾಹುಬಲಿಯಾಗಿ ಕತ್ತಿ ವರಸೆ ತೋರಿದ್ದ ಪ್ರಭಾಸ್ ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಯುವಕರ ಹಾರ್ಟ್ ಕದಿಯೋದ್ರಲ್ಲೇ ನೋ ಡೌಟ್.
ಮರಾಠಿ ಮಾತನಾಡುವಂತೆ ಕನ್ನಡದ ಲಾರಿ ಚಾಲಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ
ರಾಧೆ-ಶ್ಯಾಂ ಅಪ್ಪಟ ಪ್ರೇಮ ಕತೆಯಾಗಿದ್ದು, ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳೇ ಇಲ್ಲ ಎಂದು ಹೇಳಲಾಗುತ್ತಿದೆ. ಹೌದು ಹೇಳಿಕೇಳಿ ಪ್ರಭಾಸ್ ಮಾಸ್ ಹೀರೋ. ಆಕ್ಷನ್ , ಫೈಟ್ ಸೀನ್ಸ್ ಅವರ ಡೇರಿಂಗ್ ನೆಸ್ ಗೆ ಅಭಿಮಾನಿಗಳು ಫಿದಾ ಆಗೋದು ಹೆಚ್ಚು. ಆದ್ರೆ ಈ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಿಲ್ಲದೇ ಪ್ರಭಾಸ್ ಸಿನಿಮಾ ಇಮ್ಯಾಜಿನ್ ಮಾಡ್ಕೊಳ್ಳೋದು ಕಷ್ಟವೇ. ಆದ್ರೂ ಹೊಸ ನಿರೀಕ್ಷೆಗಳನ್ನ ಸಿನಿಮಾ ಹುಟ್ಟುಹಾಕಿದೆ. ಈ ಸ್ಟೋರಿ ದಶಕಗಳ ಹಿಂದಿನ ಕಠಾ ಹಂದರ ಹೊಂದಿದ್ದು, ಪ್ಯಾರಿಸ್ ನಲ್ಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ರಾಧಾ ಕೃಷ್ಣ ಕುಮಾರ್ ಅವರು ಪ್ರಭಾಸ್ ಗೆ ಆಕ್ಷನ್ ಕಟ್ ಹೇಳಿದ್ದಾರೆ.
ಗುಜರಾತ್ ನಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಯಾಗುತ್ತಿಲ್ಲ..!
ಸದ್ಯ ಪ್ರಭಾಸ್ ರಾಧೆ-ಶ್ಯಾಂ ಸಿನಿಮಾದ ಬಳಿಕ 2 ಬಿಗ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳನ್ನ ಕೈಗೆತ್ತುಕೊಳ್ಳಲಿದ್ದಾರೆ. ಈಗಾಗಲೇ ಬಹುನಿರೀಕ್ಷೆ ಕೆಜಿಎಫ್ ಟೀಂ, ಪ್ರಶಾಂತ್ ನೀಲ್ ಡೈರೆಕ್ಷನ್, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಪ್ರಭಾಸ್ ನಟನೆಯಲ್ಲಿ ಸಲಾರ್ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ. ಈ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಾದ ಬಳಿಕ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳ್ತಿರುವ ಆದಿಪುರುಷ್ ನಲ್ಲಿ ರಾಮನಾಗಿ ಮಿಂಚಲಿದ್ದಾರೆ. ಇದು ಸಹ ಸಾಕಷ್ಉ ನಿರೀಕ್ಷೆ ಹುಟ್ಟುಹಾಕಿದೆ. ಇದ್ರಲ್ಲಿ ನಾಯಕಿಯಾಗಿ ಕೃತಿ ಸನೋನ್ ಕಾಣಿಸಿಕೊಳ್ಳೋದು ಬಹುತೇಕ ಖಚಿತ ಎನ್ನಲಾಗ್ತಿದೆ.
ಡಿರ್ವೊಸ್ ಕೇಸ್ ವಾಪಾಸ್ ಪಡೆಯದಕ್ಕೆ ಪತ್ನಿಯ ಖಾಸಗಿ ಫೋಟೋಗಳ ಹರಿಬಿಟ್ಟ!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








