ಆತ್ಮಹತ್ಯೆ ಪತ್ರ ಬರೆದು “ರಾಧೆ ಶ್ಯಾಮ್” ಟೀಮ್ ಗೆ ಶಾಕ್ ಕೊಟ್ಟ ಪ್ರಭಾಸ್ ಫ್ಯಾನ್..! ಕಾರಣ ಏನ್ ಗೊತ್ತಾ..?
ಹೈದ್ರಾಬಾದ್ : ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಅವರ ವರ್ಚಸ್ಸೇ ಬದಲಾಗಿದೆ.. ಭಾರತದ ಬಿಗ್ ಸ್ಟಾರ್ ಆಗಿರುವ ಪ್ರಭಾಸ್ ಗೆ ಅಭಿಮಾನಿಗಳ ಸಂಖ್ಯೆಯೂ ದುಪ್ಟಟ್ಟಾಗಿದೆ.. ಈ ನಡುವೆ ಪ್ರಭಾಸ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಪ್ರಮುಖವಾಗಿ ಪ್ರಶಾಂತ್ ನೀಲ್ ಅವರ ನಿರ್ದೇಶನ ಹೊಂಬಾಳೆ ಫಿಲಮ್ಸ್ ನ ಬ್ಯಾನರ್ ನ ಅಡಿಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ನಲ್ಲಿ ಬ್ಯುಸಿಯಿದ್ದಾರೆ.
ಇನ್ನೂ ಪ್ರಭಾಸ್ ಹಾಗೂ ಕನ್ನಡತಿ ಪೂಜಾ ಹೆಗಡೆ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯ್ತಾಯಿರೋ ಹೊತ್ತಲ್ಲೇ ಪ್ರಭಾಸ್ ಅಭಿಮಾನಿಯೊಬ್ಬ ಸಿನಿಮಾ ತಂಡಕ್ಕೆ ಶಾಕ್ ನೀಡಿದ್ದಾನೆ..
ಅಲ್ಲು ಅರ್ಜುನ್ ಗೆ ನೋಟಿಸ್ ಕಳುಹಿಸಿದ ಕನ್ನಡಿಗ ಸಜ್ಜನರ್ : ಕಾರಣವೇನು…?
ಆಂಧ್ರ ಮೂಲದ ಪ್ರಭಾಸ್ ಅಭಿಮಾನಿ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಂದ್ಹಾಗೆ ಈತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದು ರಾಧೆ ಶ್ಯಾಮ್ ಚಿತ್ರದಿಂದ. ಇದಕ್ಕೆ ಈತನ ಕಾರಣ ನಿಜಕ್ಕೂ ಶಾಕ್ ಆಗುತ್ತೆ.. ವಿಚಿತ್ರ ಎನಿಸುತ್ತೆ.. ರಾಧೆ ಶ್ಯಾಮ್ ಚಿತ್ರದ ಬಿಡುಗಡೆ ಬಗ್ಗೆ ಯಾವುದೇ ಅಪ್ಡೇಟ್ ಬಂದಿಲ್ಲದ ಕಾರಣಕ್ಕೆ ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದ್ಹಾಗೆ 2022 ಜನವರಿ 14ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಸಿನಿಮಾ ತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ… ಪ್ರಭಾಸ್ ಹುಟ್ಟುಹಬ್ಬದ ನಂತರ ರಾಧೆ ಶ್ಯಾಮ್ ಸಿನಿಮಾದ ಯಾವ ಅಪ್ಡೇಟ್ ಹೊರ ಬಂದಿಲ್ಲ. ಹೀಗಾಗಿ ಚಿತ್ರತಂಡದ ನಡೆಯಿಂದ ಬೇಸತ್ತ ಅಭಿಮಾನಿ ಈ ರೀತಿ ಪತ್ರ ಬರೆದಿದ್ದಾನೆ..
ಪತ್ರದಲ್ಲಿ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ , ನಿರ್ದೇಶಕ ರಾಧಾಕೃಷ್ಣ ಹೆಸರನ್ನ ಉಲ್ಲೇಖಿಸಿ ತನ್ನ ಸಾವಿಗೆ ಇವರೇ ಕಾರಣ, ಜವಾಬ್ದಾರಿ ಆಗಿರುತ್ತಾರೆ. ಇಲ್ಲಿಯತನಕ ನಾನು ಯಾವ ಪತ್ರವನ್ನೂ ಬರೆದಿರಲಿಲ್ಲ. ಆದರೆ ಒಂದು ಸಿನಿಮಾಗಾಗಿ ಆತ್ಮಹತ್ಯೆ ಪತ್ರ ಬರೆಯುವಂತೆ ಆಗಿದೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾನೆ.
ಇಲ್ಲಿಯ ವರೆಗೂ ಪ್ರಭಾಸ್ ಆಗಲಿ ಚಿತ್ರತಂಡವಾಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ. ಆದ್ರೆ ಅಭಿಮಾನಿಯ ಅತಿರೇಕದ ವರ್ತನೆಗೆ ನೆಟ್ಟಿಗರು , ಪ್ರಭಾಸ್ ಅಭಿಮಾನಿಗಳು ಗರಂ ಆಗಿದ್ದಾರೆ..








