ನಿಮ್ಮನ್ನು ಮತ್ತೆ ಪರದೆ ಮೇಲೆ ನೋಡೋದು ಯಾವಾಗ..? ಎಂಬ ಪ್ರಶ್ನೆಗೆ ಸಿಂಡ್ರೆಲ್ಲಾ ಏನಂದ್ರು..?
ಬೆಂಗಳೂರು : ನಟ ಯಶ್ ಜೊತೆ ಮದುವೆ ಬಳಿಕ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಮನೆಯಲ್ಲೇ ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮಿಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುವ ರಾಧಿಕಾ, ತಮ್ಮ ಮತ್ತು ಮಕ್ಕಳ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಇದೇ ರೀತಿ ಇತ್ತೀಚೆಗೆ ರಾಧಿಕಾ ಅವರು ಒಂದು ಸೆಲ್ಫಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈ ಫೋಟೋಗೆ ಅಭಿಮಾನಿಯೊಬ್ಬರು, ಹೇಗಿದ್ದೀರಾ ರಾಧಿಕಾ? ನಾವು ನಿಮ್ಮನ್ನು ಮತ್ತೆ ಪರದೆ ಮೇಲೆ ನೋಡುವುದು ಯಾವಾಗ..? ಆದಷ್ಟು ಬೇಗ ಬನ್ನಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿಂಡ್ರೆಲಾ, ಖಂಡಿತ ಎಂದು ಹೇಳಿದ್ದಾರೆ.
ಇದೇ ಫೋಟೋಗೆ ಇನ್ನೊಬ್ಬರು ಕಮೆಂಟ್ ಮಾಡಿ, ನಿಮ್ಮ ಒಂದು ಪೋಸ್ಟ್ ಗಾಗಿ ಹಲವು ದಿನಗಳಿಂದ ಕಾಯ್ತಿದ್ದೀನಿ. ಕೊನೆಗೂ ಒಂದು ಪೋಸ್ಟ್ ಹಾಕಿದ್ದೀರಿ ಧನ್ಯವಾದಗಳು. ಅಲ್ಲದೆ ಆದಷ್ಟು ಬೇಗ ಐರಾ ಫೋಟೋಗಳನ್ನು ಅಪ್ಲೋಡ್ ಮಾಡಿ. ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದಯಮಾಡಿ ಆಕೆಯ ಫೋಟೋಗಳನ್ನು ಪೋಸ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಶೀಘ್ರವೇ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದಾರೆ ರಾಧಿಕಾ.