ಮೂಲಂಗಿ ತಿನ್ನುವ ಸರಿಯಾದ ವಿಧಾನ ತಿಳಿದರೆ ಗ್ಯಾಸ್,  ಹೊಟ್ಟೆಯ ಸಮಸ್ಯೆ ಬರುವುದಿಲ್ಲ…

1 min read

ಮೂಲಂಗಿ ತಿನ್ನುವ ಸರಿಯಾದ ವಿಧಾನ ತಿಳಿದರೆ ಗ್ಯಾಸ್,  ಹೊಟ್ಟೆಯ ಸಮಸ್ಯೆ ಬರುವುದಿಲ್ಲ…

ಮೂಲಂಗಿ ಕೇವಲ ಹೊಟ್ಟೆ ತುಂಬಿಸುವ ತರಕಾರಿ ಅಷ್ಟೇ ಅಲ್ಲ, ಮೂಲಂಗಿಯಿದಲೂ ಹಲವು ಆರೋಗ್ಯಕರ ಪ್ರಯೋಜನಗಳಿವೆ.  ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಮೂಲಂಗಿಯ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗತ್ತಿದೆ.  ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳನ್ನು ದೂರವಿಡಬಹುದು. ಮೂಲಂಗಿ ತಿನ್ನುವುದರಿಂದ ಹೃದಯ ಸಂಬಂಧಿ  ದೋಷಗಳು ಕಡಿಮೆಯಾಗುತ್ತವೆ.

ಆದರೆ ಅನೇಕ ಜನರು ಮೂಲಂಗಿ ತಿನ್ನುವುದಕ್ಕೆ ಹಿಂಜರಿಯುತ್ತಾರೆ.  ಮೂಲಂಗಿ ತಿಂದರೆ ಗ್ಯಾಸ್ ಬರುತ್ತದೆ, ಇದರಿಂದ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಕೆಲವರು ದೂರುತ್ತಾರೆ.  ಅನೇಕ ಜನರು ಮೂಲಂಗಿ ತಿಂದ ನಂತರ ಹೊಟ್ಟೆ ನೋವು ಎಂದು ದೂರುತ್ತಾರೆ.   ಆದರೆ ಸರಿಯಾದ ರೀತಿಯಲ್ಲಿ ಮೂಲಂಗಿಯನ್ನ ಸೇವಿಸಿದಿದ್ದರೆ ಈ  ರೀತಿ ಉಂಟಾಗುತ್ತದೆ.  ಮೂಲಂಗಿಯನ್ನ ತಿನ್ನಲು ಸಹ   ಸರಿಯಾದ ಸಮಯವಿದೆ.

ಮೂಲಂಗಿ ತಿನ್ನಲು ಸರಿಯಾದ ಸಮಯ ಯಾವುದು?

ಮೂಲಂಗಿಯನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ರಾತ್ರಿಯ ಊಟದಲ್ಲಿ ಕೂಡ ಮೂಲಂಗಿಯನ್ನು ಬಳಸಬಾರದು. ಮೂಲಂಗಿಯನ್ನು ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ತಿನ್ನಬೇಕು.  ನೀವು ಬಯಸಿದರೆ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ  ಸ್ನ್ಯಾಕ್ಸ್ ಸಮಯದಲ್ಲಿ ನೀವು ಮೂಲಂಗಿಯನ್ನು ತಿನ್ನಬಹುದು. ಈ ಸಮಯದಲ್ಲಿ ಮೂಲಂಗಿಯನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಮೂಲಂಗಿಯ ಎಲ್ಲಾ ಪೋಷಕಾಂಶಗಳು ಸಿಗುತ್ತದೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.

ಮೂಲಂಗಿಯನ್ನು ತಿನ್ನುವ ಸರಿಯಾದ ಮಾರ್ಗ

ನೀವು ಹಸಿ ಮೂಲಂಗಿ ತಿನ್ನುವವರಾದರೆ  ಇದರೊಂದಿಗೆ ಹಸಿ ತರಕಾರಿಗಳನ್ನ ಮಿಶ್ರಣ ಮಾಡಿಕೊಂಡು ತಿನ್ನಿ. ಉದಾಹರಣೆಗೆ ಸೌತೆಕಾಯಿ, ಟೊಮೇಟೊ, ಕ್ಯಾರೆಟ್ ಇತ್ಯಾದಿಗಳನ್ನು ಮಿಶ್ರಣ ಮಾಡಿ ಸಲಾಡ್‌ನಂತೆ ತಿನ್ನಬಹುದು.

ಅತಿಯಾಗಿ ಬಲಿತ ಮೂಲಂಗಿಯನ್ನು ಖರೀದಿಸಬಾರದು . ಎಳೆಯ ಸಣ್ಣ ಮತ್ತು ಸಿಹಿ ಮೂಲಂಗಿಯನ್ನು  ತಿನ್ನಲು ಬಳಸಿ.

ಮೂಲಂಗಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಮೂಲಂಗಿ ತಿಂದ ನಂತರ ಸ್ವಲ್ಪ ನಡೆದಾಡಿ  .

ಮೂಲಂಗಿಯನ್ನು ಯಾರು ತಿನ್ನಬಾರದು?

ನಿಮ್ಮ ದೇಹದಲ್ಲಿ ಹೆಚ್ಚು ನೋವಿದ್ದರೆ  ಮೂಲಂಗಿಯನ್ನು ಸೇವಿಸಬಾರದು.

ದೈಹಿಕ ಚಟುವಟಿಕೆ  ಮಾಡದ ಜನರು ಮೂಲಂಗಿ ತಿನ್ನುವುದು ತಪ್ಪಿಸಬೇಕು.  ಅಂಥವರು ಮೂಲಂಗಿ  ಸೇವಿಸುವುದರಿಂದ ಹೊಟ್ಟೆ ನೋವು ಅಥವಾ ಗ್ಯಾಸ್ ಸಮಸ್ಯೆ ಹೆಚ್ಚಾಗಬಹುದು.

ಮೂಲಂಗಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು

ಚಳಿಗಾಲದಲ್ಲಿ ಪ್ರತಿದಿನ ಮೂಲಂಗಿಯನ್ನು ತಿನ್ನುವುದರಿಂದ ಕೆಮ್ಮು ಮತ್ತು ನೆಗಡಿ ಸಮಸ್ಯೆ ದೂರವಾಗುತ್ತದೆ.

ಮೂಲಂಗಿಯ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಮೂಲಂಗಿ ಪ್ರಯೋಜನಕಾರಿಯಾಗಿದೆ.

ಮೂಲಂಗಿಯು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಹ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd