ಸ್ಪೇನ್ ಗೂಳಿ ರಫೆಲ್ ನಡಾಲ್ ಗೆ ಕೋವಿಡ್ -19 ಸೋಂಕು…! Rafael Nadal saaksha tv
ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ಅವರಿಗೆ ಕೋವಿಡ್ 19 ಸೋಂಕಿನಿAದ ಬಳಲುತ್ತಿದ್ದಾರೆ.
ದುಬೈ ನಲ್ಲಿ ಕಳೆದ ವಾರ ನಡೆದ ಪ್ರದರ್ಶನ ಟೂರ್ನಿಯ ನಂತರ ನಡಾಲ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಇದೀಗ ನಡಾಲ್ ಅವರು ಹೋಮ್ ಐಸೋಲೆಷನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಈಗ ಮನೆ ಬಂದಿದ್ದು ಹೋಮ್ ಐಸೋಲೇಷನ್ ನಲ್ಲಿದ್ದೇನೆ.
ನನ್ನ ಜೊತೆ ಸಂಪರ್ಕದಲ್ಲಿದ್ದವರಿಗೂ ಎಚ್ಚರಿಕೆಯಿಂದಿರಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ರಫೆಲ್ ನಡಾಲ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳ ಬಳಿಕ ರಫೆಲ್ ನಡಾಲ್ ಅವರು ದುಬೈ ಇವೆಂಟ್ ನಲ್ಲಿ ಸ್ಪರ್ಧೆ ಮಾಡಿದ್ದರು.
ಆದ್ರೆ ಈ ಟೂರ್ನಿಯಲ್ಲಿ ರಫೆಲ್ ನಡಾಲ್ ಅವರು ಆಂಡೆ ಮರ್ರೆ ವಿರುದ್ಧ ನೇರ ಸೆಟ್ ಗಳಿಂದ ಸೋಲು ಅನುಭವಿಸಿದ್ದರು.
20 ಗ್ರಾö್ಯಂಡ್ ಸ್ಲಾö್ಯಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ರಫೆಲ್ ನಡಾಲ್ ಅವರು ಪಾದದ ನೋವಿನಿಂದ ಬಳಲುತ್ತಿದ್ದಾರೆ.
ಹೀಗಾಗಿ ಅವರು ಕಳೆದ ಬಾರಿ ವಿಂಬಲ್ಡನ್, ಟೋಕಿಯೋ ಒಲಿಂಪಿಕ್ಸ್ ಹಾಗೂ ಯುಎಸ್ ಓಪನ್ ಟೂರ್ನಿಗಳಲ್ಲಿ ಭಾಗಿಯಾಗಿರಲಿಲ್ಲ.
ಇದೀಗ ಕೋವಿಡ್ ಸೋಂಕಿನಿAದ ಚೇತರಿಸಿಕೊಂಡು ಮುಂಬರುವ ಆಸ್ಟೆçÃಲಿಯನ್ ಓಪನ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಕೂಡ ಅನುಮಾನವಾಗಿದೆ.
ಈಗಾಗಲೇ ದಾಖಲೆಯ ಗ್ರಾö್ಯಂಡ್ ಸ್ಲಾö್ಯಂ ಪ್ರಶಸ್ತಿಗಳ ಸಾಲಿಗೆ ಸೇರಿಕೊಳ್ಳಲು ರಫೆಲ್ ನಡಾಲ್, ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಅವರ ನಡುವೆ ಸ್ಪರ್ಧೆ ನಡೆಯುತ್ತಿದೆ.
ಈ ಮೂವರು ಕೂಡ ತಲಾ 20 ಗ್ರಾö್ಯಂಡ್ ಸ್ಲಾö್ಯಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.









