ಬೆಂಗಳೂರು: ಮೇ24ರಂದು ರಾಗಿಣಿ ತಮ್ಮ ಬರ್ತ್ ಡೇ ಆಚರಿಸಿಕೊಂಡಿದ್ದರಂತೆ. ಈ ಬರ್ತ್ ಡೇ ಪಾರ್ಟಿಗೆ ಲೂಮ್ ಪೆಪ್ಪರ್ನಿಂದ ರಾಗಿಣಿ ಡ್ರಗ್ಸ್ ಖರೀದಿ ಮಾಡಿದ್ದರು ಎನ್ನಲಾಗಿದೆ.
ಪ್ರತಿ ವಾರದ ವೀಕೆಂಡ್ಗಳಲ್ಲಿ ತಮ್ಮ ರೆಸಾರ್ಟ್ ಸೇರಿದಂತೆ ವಿವಿಧ ಕಡೆ ಬಾಯ್ಫ್ರೆಂಡ್ ಜತೆ ಪಾರ್ಟಿಗಳಿಗೆ ಹೋಗುತ್ತಿದ್ದಾಗಿ ರವಿಶಂಕರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಪಾರ್ಟಿಗಳಿಗೆ ಹೋಗುವಾಗ ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.
ಆರ್ಗಾನಿಕ್ ಸ್ಮೋಕ್ ಸಿಗರೇಟ್..!
ಸಿಸಿಬಿ ಪೊಲೀಸರು ರಾಗಿಣಿ ಮನೆ ಮೇಲೆ ನಡೆಸಿದ ದಾಳಿ ವೇಳೆ ಆರ್ಗಾನಿಕ್ ಸ್ಮೋಕ್ ಸಿಗರೇಟ್ಗಳು ಸಿಕ್ಕಿದ್ದವು. ಮನೆ ತಪಾಸಣೆ ವೇಳೆ ಕಟ್ಟಿಗೆಯ ಬಾಕ್ಸ್ನಲ್ಲಿ ಸಿಗರೇಟ್ಗಳು ಸಿಸಿಬಿ ಅಧಿಕಾರಿ ಅಂಜುಮಾಲಾ ನಾಯಕ್ಗೆ ಸಿಕ್ಕಿದ್ದವು. ಆರ್ಗಾನಿಕ್ ಸ್ಮೋಕ್ ಹೆಸರಿನ ಸಿಗರೇಟಿಲ್ಲಿ ಗಾಂಜಾ ತುಂಬಿಸಿಕೊಂಡು ರಾಗಿಣಿ ಸಿಗರೇಟ್ ಸೇವನೆ ಮಾಡುತ್ತಿದ್ದಳಂತೆ. ಈ ಬಗ್ಗೆ ಕೇಳಿದರೆ ಈ ಸಿಗರೇಟ್ಗಲ್ಲಿ ನಿಕೋಟಿನ್ ಅಥವಾ ತಂಬಾಕು ಇಲ್ಲ ಎಂದು ರಾಗಿಣಿ ಸಮರ್ಥನೆ ನೀಡಿದ್ದಳಂತೆ. ಅನುಮಾನಗೊಂಡ ಸಿಸಿಬಿ ಅಧಿಕಾರಿ ಅಂಜುಮಾಲಾ ನಾಯಾಕ್, ಸಿಗರೇಟ್ಗಳನ್ನು ಎಫ್ಎಸ್ಎಲ್ ಲ್ಯಾಬ್ಗೆ ಕಳಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ.
ಡ್ರೈವರ್ ಇಮ್ರಾನ್ ವಶಕ್ಕೆ..!
ಕಳೆದ ರಾತ್ರಿ ರಾಗಿಣಿ ದ್ವಿವೇದಿ ಕಾರು ಚಾಲಕ ಇಮ್ರಾನ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ರಾಗಿಣಿಗೆ ಡ್ರಗ್ಸ್ನನ್ನು ಇಮ್ರಾನ್ ತಂದು ಕೊಡುತ್ತಿದ್ದನಂತೆ. ಹೀಗಾಗಿ ಲೂಮ್ ಪೆಪ್ಪರ್ ಹೇಳಿಕೆ ಆಧಾರದ ಮೇಲೆ ಇಮ್ರಾನ್ನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.