ಮಲಯಾಳಂ ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ..!
ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ನಲ್ಲಿ ಸಿಲುಕಿ ಒದ್ದಾಡಿ ನಂತರ ಜಾಮೀನಿನ ಮೇಲೆ ಹೊರಬಂದ ರಾಗಿಣಿ ದ್ವಿವೇದಿ ಮತ್ತೆ ತಮ್ಮನ್ನ ತಾವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.. ಸೋಷಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಯೂಟ್ಯೂಬ್ ಚಾನೆಲ್ ಕೂಡ ಕ್ರಿಯೇಟ್ ಮಾಡಿದ್ದಾರೆ.. ಸ್ಯಾಂಡಲ್ ವುಡ್ ನಲ್ಲಿ ಕೆಲ ಸಿನಿಮಾಗಳಲ್ಲಿ ಬ್ಯುಸಿಯಿರೋ ನಟಿ , ಇತ್ತೀಚೆಗಷ್ಟೇ ಹಿಂದಿಯ ಆಲ್ ಬಮ್ ಸಾಂಗ್ ಗೂ ಹೆಜ್ಜೆ ಹಾಕಿದ್ದು, ಈಗ ಮಲಯಾಳಂ ಸಿನಿಮಾ ಕಡೆ ಮುಖ ಮಾಡಿದ್ದಾರೆ..
ನಟಿ ರಾಗಿಣಿ, ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕೇರಳದ 200 ವರ್ಷ ಹಳೆಯ ಟೀ ಎಸ್ಟೇಟ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ.. ಈ ಸಿನಿಮಾಗೆ ಶೈಲಾ ಎಂದು ಟೈಟಲ್ ಇಡಲಾಗಿದೆ..
ಸಿನಿಮಾವನ್ನು ಬಾಲು ನಾರಾಯಣ್ ಎಂಬುವರು ನಿರ್ದೇಶನ ಮಾಡುತ್ತಿದ್ದು, ಅನಿಲ್ ಜಾನ್ಸನ್ಸಂಗೀತವಿದೆ.. ಮಲಯಾಳಂನಲ್ಲಿ ಮಾತ್ರವೇ ಅಲ್ಲದೆ ಈ ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ. ಅಂದ್ಹಾಗೆ ಈ ಹಿಂದೆ 2010 ರಲ್ಲಿ ಮಲಯಾಳಂನ ಕಂದಹಾರ್ ಸಿನಿಮಾದಲ್ಲಿ ರಾಗಿಣಿ ನಟಿಸಿದ್ದರು.
2012 ರಲ್ಲಿ ಫೇಸ್ 2 ಫೇಸ್ ಸಿನಿಮಾದಲ್ಲಿ ನಟಿಸಿದ್ದರು. ಪ್ರಸ್ತುತ ಕನ್ನಡದಲ್ಲಿ ರಾಗಿಣಿ ನಟಿಸಿರುವ ಗಾಂಧಿಗಿರಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ.. ಈ ಸಿನಿಮಾದಲ್ಲಿ ನಿರ್ದೇಶಕ ಪ್ರೇಮ್ ಹೀರೋ ಆಗಿದ್ದಾರೆ. ಅದರ ಬಳಿಕ ನಂದ ಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲಿಯೂ ರಾಗಿಣಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.