Sandalwood : ತುಪ್ಪದ ಬೆಡಗಿ ರಾಗಿಣಿಗೆ ಹುಟ್ಟು ಹಬ್ಬದ ಸಂಭ್ರಮ..!!

1 min read

ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಸದ್ಯ ಸಂಕಷ್ಟಗಳು ಸವಾಲುಗಳನ್ನ ಎದುರಿಸಿ , ಮತ್ತೆ ಸಿನಿಮಾರಂಗದಲ್ಲಿ , ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ  ನಟಿ ರಾಗಿಣಿ ದ್ವಿವೇದಿ ಇಂದು 32 ನೇ ವಸಂತಕ್ಕೆ ಕಾಲಿಟ್ಟಿದ್ದು , ಅಭಿಮಾನಿಗಳಿಂದ ಶುಭಾಷಯಗಳ  ಮಹಾಪೂರವೇ ಹರಿದುಬರುತ್ತಿದೆ..

ರಾಗಿಣಿ ಸಾಲು ಸಾಲು ಸಿನಿಮಾಗಳಲ್ಲಿ –ಬ್ಯುಸಿಯಾಗಿದ್ಧಾರೆ.. ಕನ್ನಡ ಅಷ್ಟೇ ಅಲ್ದೇ ತಮಿಳು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದು , ಇತ್ತೇಚೆಗಷ್ಟೇ ಸಂತಾನಂ ಅವರ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದು ಶೂಟಿಂಗ್ ಮುಗಿಸಿದ್ದಾರೆ.. ಇನ್ನೂ ಸಾಕಷ್ಟು ಸಿನಿಮಾ ಆಲ್ ಬಮ್ ಹಾಡುಗಳಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ಕೆಲ ತಿಂಗಳ ಹಿಂದಷ್ಟೇ ಸ್ವಂತ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು ಆಗಾಗ ವಿಡಿಯೋಗಳನ್ನ ಹಂಚಿಕೊಳ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ಥಾರೆ..

ಅಂದ್ಹಾಗೆ ಕೆಂಪೇಗೌಡ , ವೀರಮದಕರಿ ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಚಂದನವನದಲ್ಲಿ ಖ್ಯಾತಿ ಗಳಿಸಿರುವ ರಾಗಿಣಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು , ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಬೆಡಗಿ ಎಂದೇ ಕರೆಸಿಕೊಳ್ತಾರೆ.. ಸದ್ಯ ಗಾಂಧಿಗಿರಿ , ಕರ್ವ 3 , ಜಾನಿ ವಾಕರ್ ,  ಒನ್ ಟು ಒನ್ ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ.. ಶೀಘ್ರದಲ್ಲೇ ರಿಲೀಸ್ ದಿನಾಂಕಗಳು ಗೊತ್ತಾಗಲಿವೆ..

ಅಷ್ಟೇ ಅಲ್ದೇ ಹಿಂದಿ , ಕನ್ನಡ , ಮಲಯಾಳಂನಲ್ಲಿ ಮೂಡಿ ಬರುತ್ತಿರುವ ಸಾರಿ ಕರ್ಮ ರಿಟರ್ನ್ಸ್ ಸಿನಿಮಾದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ..

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd