ಸಂಕಷ್ಟಗಳು ಸವಾಲುಗಳನ್ನ ಎದುರಿಸಿ , ಮತ್ತೆ ಸಿನಿಮಾರಂಗದಲ್ಲಿ , ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ 32ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ.
ರಾಗಿಣಿ ಸಾಲು ಸಾಲು ಸಿನಿಮಾಗಳಲ್ಲಿ –ಬ್ಯುಸಿಯಾಗಿದ್ಧಾರೆ.. ಕನ್ನಡ ಅಷ್ಟೇ ಅಲ್ದೇ ತಮಿಳು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದು , ಇತ್ತೇಚೆಗಷ್ಟೇ ಸಂತಾನಂ ಅವರ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದು ಶೂಟಿಂಗ್ ಮುಗಿಸಿದ್ದಾರೆ.. ಇನ್ನೂ ಸಾಕಷ್ಟು ಸಿನಿಮಾ ಆಲ್ ಬಮ್ ಹಾಡುಗಳಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ಕೆಲ ತಿಂಗಳ ಹಿಂದಷ್ಟೇ ಸ್ವಂತ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು ಆಗಾಗ ವಿಡಿಯೋಗಳನ್ನ ಹಂಚಿಕೊಳ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ಥಾರೆ..
ಇದೀಗ ರಾಗಿಣಿ ಬಾಡಿ ಶೇಮಿಂಗ್ ವಿರುದ್ಧ ಮಾತನಾಡಿದ್ದಾರೆ.. ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ಮೃತಪಟ್ಟ ನಂತರ ಅನೇಕ ನಟಿಯರು ಬಾಡಿ ಶೇಮಿಂಗ್ ವಿರುದ್ಧ ಧ್ವನಿ ಎತ್ತಿದ್ದಾರೆ..
ಈಗ ರಾಗಿಣಿ ಮಾತನಾಡಿದ್ದು “ ನಾವು ಯಾರು ಏನು ಅನ್ನುತ್ತಾರೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ದೇಹವನ್ನು ಮೊದಲು ನಾವು ಪ್ರೀತಿಸಬೇಕು. ಹಾಗೆ ಪ್ರೀತಿಸಿಕೊಂಡರೆ ಮಾತ್ರ, ಇಂತಹ ಅನಾಹುತಗಳು ನಡೆಯುವುದಿಲ್ಲ. ಆ ಹುಡುಗಿ ಸಾವು ನಿಜಕ್ಕೂ ನನಗೆ ಆಘಾತ ತರಿಸಿದೆ ಎಂದಿದ್ದಾರೆ..
ಅಂದ್ಹಾಗೆ ಕೆಂಪೇಗೌಡ , ವೀರಮದಕರಿ ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಚಂದನವನದಲ್ಲಿ ಖ್ಯಾತಿ ಗಳಿಸಿರುವ ರಾಗಿಣಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು , ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಬೆಡಗಿ ಎಂದೇ ಕರೆಸಿಕೊಳ್ತಾರೆ.. ಸದ್ಯ ಗಾಂಧಿಗಿರಿ , ಕರ್ವ 3 , ಜಾನಿ ವಾಕರ್ , ಒನ್ ಟು ಒನ್ ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ.. ಶೀಘ್ರದಲ್ಲೇ ರಿಲೀಸ್ ದಿನಾಂಕಗಳು ಗೊತ್ತಾಗಲಿವೆ..