ಡೈನಾಮಿಕ್ ಪ್ರಿನ್ಸ್ ಅವರ ಪತ್ನಿ ನಟಿ ರಾಗಿಣಿ ಅಭಿನಯದ ಚೊಚ್ಚಲ ಚಿತ್ರ ಲಾ ಟ್ರೇಲರ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನೆಮಾವಾಗಿ ಬಿಡುಗಡೆಗೊಳ್ಳುತ್ತಿರುವ ಲಾ ಚಿತ್ರ ಶೂಟಿಂಗ್ ಶುರುವಾದಾಗಿನಿಂದಲೂ ತನ್ನ ಕ್ಯೂರಿಯಾಸಿಟಿಯನ್ನ ಹೆಚ್ಚಿಸುತ್ತಲೇ ಇದೆ. ಟ್ರೇಲರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀವ್ಸ್ ಪಡೆದುಕೊಂಡಿದೆ. ಲಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿರುವ ರಾಗಿಣಿ ತಮ್ಮ ಅಭಿನಯದ ಅನುಭವವನ್ನ ನಮ್ಮ ಸಾಕ್ಷಾ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದಕ್ಕೆ ಬಹಳ ಸಪೋರ್ಟ್ ಬೇಕು. ನನಗೆ ತನ್ನ ತಾಯಿ ಮನೆ ಹಾಗೂ ಗಂಡನ ಮನೆಯಲ್ಲೂ ಸಿಕ್ಕಾಪಟ್ಟೆ ಪ್ರೋತ್ಸಾಹ ಸಿಕ್ಕಿದೆ. ಇದು ನನಗೆ ಬ್ಲೆಸ್ಸಿಂಗ್ ಇದ್ದ ಹಾಗೆ. ನನಗೆ ತಂದೆ ತಾಯಿ , ಪ್ರಜ್ವಲ್ ದೇವರಾಜ್ ಅತ್ತೆ , ಮಾವ ಎಲ್ಲರೂ ತುಂಬ ಸಪೋರ್ಟ್ ಮಾಡಿದ್ದಾರೆ. ಆಕ್ಟಿಂಗ್ ಕೆರೆಯರ್ ಶುರುಮಾಡುವುದೇ ಒಂದು ದೊಡ್ಡ ಹೆಜ್ಜೆ. ಅದ್ರಲ್ಲೂ ಈತರಹದ ರೋಲ್ ಪ್ಲೇ ಮಾಡೋದು ಒಂದು ಕಡೆ ಆದ್ರೆ ಒಂದು ಒಳ್ಳೆಯ ಟೀಂ ಜೊತೆಗೆ ನಾನು ಕೆರಿಯರ್ ಶುರುಮಾಡ್ತಿರುವುದು ನಿಜಕ್ಕೂ ಖುಷಿ ತಂದುಕೊಟ್ಟಿದೆ ಎನ್ನುವುದು ರಾಗಿಣಿ ಅಭಿಪ್ರಾಯ.
ಇನ್ನೂ ಹಿಂದೆಯೂ ಅನೇಕ ಬಾರಿ ನಟನೆಗೆ ಅವಕಾಶಗಳು ಸಿಕ್ಕಿದ್ದರು ಲಾ ಚತ್ರದಂತಹ ಇಂಟ್ರೆಸ್ಟಿಂಗ್ ಕಥೆಗಳು ಸಿಕ್ಕಿರಲಿಲ್ಲ. ಲಾ ಚಿತ್ರದ ಕಥೆ ಹಾಗೂ ಅದರಲ್ಲಿನ ಪಾತ್ರ ನನಗೆ ತುಂಬ ಹಿಡಿಸಿತು ಎಂದು ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.
ನಟಿಯಾಗುತ್ತೇನೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಆದ್ರೆ ಒಳ್ಳೆ ಆಪರ್ಚುನಿಟಿ ಸಿಕ್ತು. ಮುಂದೆಯೂ ಈ ರೀತಿಯಾದ ಉತ್ತಮ ಕಥೆಗಳು ಸಿಕ್ರೆ ಖಂಡಿತವಾಗಿ ನಾನು ನಟನೆ ಮಾಡುತ್ತೇನೆ. ಚಿತ್ರದಲ್ಲಿನ ನಂದಿನಿ ಪಾತ್ರ ನನ್ನ ನಿಜಜೀವನದ ಪಾತ್ರವನ್ನೇ ಹೋಲುತ್ತದೆ. ಹೀಗಾಗಿ ನನಗೆ ಈ ಪಾತ್ರ ತುಂಬ ಖುಷಿ ತಂದುಕೊಟ್ಟಿದೆ ಎಂದಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ನಿಂದ ಕೂಡಿರುವ ಲಾ ಚಿತ್ರಕ್ಕೆ ರಘು ಸಮರ್ಥ್ ಅವರು ಆಕ್ಷನ್ ಕಟ್ ಹೇಳಿದ್ರೆ, ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಎಂ ಗೋವಿಂದ ಅವರು ಬಂಡವಾಳ ಹೂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಅಡಿ ಸಿನಿಮಾ ಸಿದ್ಧಗೊಂಡಿದ್ದು, ಇದೇ ಜುಲೈ 17ರಂದು ಒಟಿಟಿ ಪ್ಲಾಟ್ ಫಾರ್ಮ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.