ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧಿನ ಖೈದಿಯಾಗಿರುವ ನಟಿ ರಾಗಿಣಿ ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಮತ್ತೆ ಮುಂದೂಡಿದೆ. 12 ದಿನಗಳ ಕಸ್ಟಡಿಯ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ಸೆ. 19 ಕ್ಕೆ ಮುಂದೂಡಲಾಗಿದೆ.
ಇನ್ನೂ ಈ ಹಿಂದೆ ಸಿಸಿಬಿ ವಶದಲ್ಲಿದ್ದ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 16 ಅಂದ್ರೆ ಇಂದಿಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಸೆ. 19 ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಜೊತೆಗೆ ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಜಾಮೀನು ಅರ್ಜಿಯನ್ನೂ ಮುಂದೂಡಲಾಗಿದೆ.