ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ – ಪ್ರಧಾನಿ ದೈನಂದಿನ ಕಾರ್ಯಗಳನ್ನ ಟ್ವಿಟ್ ಮಾಡಿ ಟೀಕೆ
ಹಣದುಬ್ಬರ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಖಾಸಗೀಕರಣ, ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ಮುಂತಾದ ವಿಷಯಗಳಲ್ಲಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಅವರು ಟ್ವೀಟ್‌ನಲ್ಲಿ ಪ್ರಧಾನಿ ಮೋದಿಯವರ ದೈನಂದಿನ ಮಾಡಬೇಕಾದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ರೋಸ್ ಮಾರ್ನಿಂಗ್ ಕಿ ಬಾತ್ ಎಂಬ ಹ್ಯಾಷ್ ಟ್ಯಾಗ್ ಕೂಡ ಬರೆದಿದ್ದಾರೆ.
ಪ್ರಧಾನಿಯವರ to do llist ಪಟ್ಟಿಯನ್ನು ಟ್ವೀಟ್ ಮಾಡಿ ರಾಹುಲ್ ವ್ಯಂಗ್ಯವಾಡಿದ್ದಾರೆ.
- ಪೆಟ್ರೋಲ್-ಡೀಸೆಲ್-ಗ್ಯಾಸ್ ದರವನ್ನು ನಾನು ಎಷ್ಟು ಹೆಚ್ಚಿಸಬೇಕು
- ಜನರ ‘ಖರ್ಚೆ ಪೇ ಚರ್ಚಾ’ ನಿಲ್ಲಿಸುವುದು ಹೇಗೆ
- ಯುವಕರಿಗೆ ಉದ್ಯೋಗದ ಖಾಲಿ ಕನಸುಗಳನ್ನು ಹೇಗೆ ತೋರಿಸುವುದು
- ನಾನು ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?
- ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ
ಇದು ಪ್ರಧಾನಿಯವರ to do list ಎಂದು ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ 8ನೇ ಬಾರಿ ಏರಿಕೆಯಾಗಿದೆ
ಮಾರ್ಚ್ 22 ರಿಂದ ಮಾರ್ಚ್ 30 ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ನಿರಾಶಾದಾಯಕ ಸಂಗತಿ.
ಇದಕ್ಕೂ ಮುನ್ನ ಮಾರ್ಚ್ 24 ರಂದು ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ಕೊರೊನಾ ಸಂತ್ರಸ್ತರಿಗೆ ಉಚಿತವಾಗಿ ಚಿಕಿತ್ಸೆ ನೀಡಿದೆಯೇ? ಬಡವರಿಗೆ ಮತ್ತು ಕಾರ್ಮಿಕರಿಗೆ ಕನಿಷ್ಠ ಆದಾಯ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆಯೇ? ಸಣ್ಣ ಕೈಗಾರಿಕೆಗಳು ಮುಳುಗಡೆಯಾಗದಂತೆ ಸರ್ಕಾರ ಉಳಿಸಿದೆಯೇ? ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.