ರಾಹುಲ್, ದೀಪಕ್ ಹೂಡ ಶತಕದ ಜೊತೆಯಾಟ. ದೆಹಲಿ 195 ರನ್ ಟಾರ್ಗೆಟ್
ಐಪಿಎಲ್ನಲ್ಲಿ ಇಂದು ದೆಹಲಿ ಮತ್ತು ಲಕ್ನೋ ನಡುವೆ ಪಂದ್ಯ ನಡೆಯುತ್ತಿದೆ. ಲಕ್ನೋ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಲಕ್ನೋ ತಂಡ 20 ಓವರ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟ್ ನಿಂದ ಎರಡನೇ ಅರ್ಧಶತಕ ದಾಖಲಾಗಿದೆ. ಇದು ಐಪಿಎಲ್ನಲ್ಲಿ ರಾಹುಲ್ ಅವರ 29ನೇ ಅರ್ಧಶತಕ. ನಾಯಕ ರಾಹುಲ್ ಹೊರತಾಗಿ ದೀಪಕ್ ಹೂಡಾ ಕೂಡ ಅದ್ಭುತ ಇನ್ನಿಂಗ್ಸ್ ಕಟ್ಟಿದರು. 34 ಎಸೆತಗಳಲ್ಲಿ 52 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು.
ಕೆಎಲ್ ರಾಹುಲ್ ಮತ್ತು ದೀಪಕ್ ಎರಡನೇ ವಿಕೆಟ್ ಗೆ 95 ರನ್ ಗಳ ಜೊತೆಯಾಟ ನೀಡಿದರು. ಕೇವಲ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಹೂಡ ಋತುವಿನಲ್ಲಿ ಮೂರನೇ ಅರ್ಧಶತಕ ದಾಖಲಿಸಿದ್ದಾರೆ.
ಶುರುವಿನಲ್ಲೇ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಕ್ವಿಂಟನ್ ಡಿ ಕಾಕ್ ಅವರನ್ನು ಶಾರ್ದೂಲ್ ಠಾಕೂರ್ ಬಲಿಪಡೆದರು. 5ನೇ ಓವರ್ನಲ್ಲಿ ಕವರ್ ಮೇಲೆ ಹೊಡೆಯಲು ಹೋಗಿ ಲಲಿತ್ ಯಾದವ್ ಗೆ ಕ್ಯಾಚಿತ್ತರು. ಡಿ ಕಾಕ್ ಬ್ಯಾಟ್ನಿಂದ 13 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 23 ರನ್ ಗಳಿಸಿದರು.
ಡೆಲ್ಲಿ ತಂಡದ ಪರ ಕೇವಲ ಶಾರ್ದುಲ್ ಠಾಕೂರ್ ಮಾತ್ರ 3 ವಿಕೆಟ ಪಡೆದು ಮಿಂಚಿದರು ಉಳಿದರ ಪ್ರದರ್ಶನ ನೀರಸವಾಗಿತ್ತು.