Dravid | ಕೊಹ್ಲಿ, ರೋಹಿತ್, ರಾಹುಲ್ ಬಗ್ಗೆ ರಾಹುಲ್ ಹೇಳಿದ್ದೇನು..?
ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರ ಸ್ಟ್ರೈಕ್ ರೇಟ್ ಬಗ್ಗೆ ಇತ್ತೀಚಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಈ ಮೂವರಲ್ಲಿ ಒಬ್ಬರೂ ಕೂಡ ಆಕ್ರಮಣಕಾರಿ ಪ್ರದರ್ಶನ ನೀಡುತ್ತಿಲ್ಲ, ಹೀಗಾಗಿ ಇದು ತಂಡದ ಮೇಲೆ ಅನಾವಶ್ಯಕ ಒತ್ತಡ ಹೇರಿದಂತೆ ಆಗುತ್ತಿದೆ ಎಂದು ವಿಮರ್ಶೆಗಳು ಬರುತ್ತಿವೆ.
ಮುಖ್ಯವಾಗಿ ಕಳೆದ ಟಿ 20 ವಿಶ್ವಕಪ್ ನಲ್ಲಿ ಇದು ಸ್ಪಷ್ಟವಾಗಿ ಕಾಣಿಸಿತ್ತು. ಆದ್ರೆ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಎಲ್ಲಾ ಸಂದರ್ಭಗಳಲ್ಲಿಯೂ ಬ್ಯಾಟರ್ ಗಳು ವಿಧ್ವಂಸಕ ರೀತಿಯಲ್ಲಿ ಆಡುವ ಅವಶ್ಯಕತೆ ಇಲ್ಲ ಎಂದು ರಾಹುಲ್ ದ್ರಾವಿಡ್ ವಾದಿಸಿದ್ದಾರೆ. ನಮ್ಮ ಟಾಪ್ 3 ಬ್ಯಾಟರ್ ಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ.
ಅವರು ಅತ್ಯುತ್ತಮ ಆಟಗಾರರು. ಪರಿಸ್ಥಿತಿಗೆ ತಕ್ಕಂತೆ ಆಡುವುದು ಎಲ್ಲವುದಕ್ಕಿಂತ ಮುಖ್ಯವಾಗಿದೆ. ಭಾರಿ ಸ್ಕೋರ್ ಅವಶ್ಯಕತೆ ಇದ್ದಾಗ ಸ್ಟ್ರೈಕ್ ರೇಟ್ ಜಾಸ್ತಿ ಇರಬೇಕು ಎಂದು ನಾವು ಭಾವಿಸುತ್ತೇವೆ.
ಆದ್ರೆ ವಿಕೆಟ್ ವೀಕ್ ಇರುವಾಗ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಟಿ 20 ಕ್ರಿಕೆಟ್ ನಲ್ಲಿ ಸಕಾರಾತ್ಮಕ ಆರಂಭ ತುಂಬಾ ಮುಖ್ಯವಾಗಿರುತ್ತದೆ. ಆದ್ರೆ ನಮಗೆ ಅವರ ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇದೆ.
ಅವರಿಗೆ ಅವರೇನು ಮಾಡಬೇಕು ಅನ್ನೋದ್ರ ಬಗ್ಗೆಯೂ ಕ್ಲಾರಿಟಿ ಕೊಡುತ್ತೇವೆ, ಹೀಗಾಗಿ ನಮ್ಮಲ್ಲಿ ಯಾವುದೇ ಸಮಸ್ಯೆಗಳಲ್ಲಿ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗೈರಿನಲ್ಲಿ ನಾಳೆಯಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20ಯಲ್ಲಿ ನಾವು ವಿಭಿನ್ನ ಟಾಪ್ 3 ಬ್ಯಾಟರ್ ಗಳನ್ನ ನೋಡಬಹುದಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ಅತಿ ಮುಖ್ಯವಾಗಿದೆ ಎಂದಿದ್ದಾರೆ.
ಕೆ.ಎಲ್.ರಾಹುಲ್ ಗೆ ಈ ಹಿಂದೆ ಕ್ಯಾಪ್ಟನ್ಸಿ ಮಾಡಿದ ಅನುಭವವಿದೆ. ಆದ್ರೂ ಪ್ರಸ್ತುತ ಇರುವ ಬ್ಯೂಸಿ ಶೆಡ್ಯೂಲ್ ನಲ್ಲಿ ರೋಹಿತ್ ನಂತಹ ಆಟಗಾರರನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದೆ. ಅಂತಹ ಪಂದ್ಯಗಳಿಗೆ ಹಿರಿಯ ಆಟಗಾರರು ಫಿಟ್ ಆಗಿರಬೇಕು. ಹಿರಿಯ ಆಟಗಾರರು ಇಲ್ಲದಿದ್ದರೇ ಯುವ ಆಟಗಾರರಿಗೆ ಅವಕಾಶ ನೀಡಿ ನಮ್ಮಲ್ಲಿನ ಬಲವನ್ನು ಅಂದಾಜಿಸಬಹುದು. ಟಿ 20 ವಿಶ್ವಕಪ್ ವರೆಗೂ ಈ ರೋಟೆಷನ್ ಪದ್ದತಿ ನಡೆಯುತ್ತಲೇ ಇರುತ್ತದೆ ಎಂದು ದ್ರಾವಿಡ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಐಪಿಎಲ್ ನಲ್ಲಿ ಭಾರತೀಯ ನಾಯಕರ ಯಶಸ್ಸಿನ ಬಗ್ಗೆ ಮಾತನಾಡಿದ ದ್ರಾವಿಡ್, ನನಗೆ ತಿಳಿದಂತೆ ಐಪಿಎಲ್ ನಲ್ಲಿ ಕ್ಯಾಪ್ಟನ್ ಆಗಿ ಮಿಂಚುವುದೆಂದರೆ ಒಂದು ಮೆಟ್ಟಿಲು ಮೇಲೆ ಬಂದಂತೆ.
ಅದು ಭಾರತೀಯ ಕ್ರಿಕೆಟ್ ಆಟಗಾರರಿಗೆ ಒಳ್ಳೆಯ ಅನುಭವ ನೀಡುತ್ತದೆ. ಐಪಿಎಲ್ ನಲ್ಲಿ ನಾಯಕರಾಗಿ ಹಾರ್ದಿಕ್ ಪಾಂಡ್ಯ ಸಾಕಷ್ಟು ಇಂಪ್ರೆಸ್ಸಿವ್ ಆಗಿದ್ದರು.
ಆತ ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗಿದ್ದು, ಆತ ಬೌಲಿಂಗ್ ಕೂಡ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸ್ಯಾಮ್ ಸನ್, ರಾಹುಲ್, ಶ್ರೇಯಸ್ ಕೂಡ ನಾಯಕರಾಗಿ ಎಲ್ಲರ ಗಮನ ಸೆಳೆದಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.








