ನಮ್ಮೋವ್ರು ಸಣ್ಣವ್ರು ನಾನು ನಿರಾಸೆಗೊಳ್ಳಲ್ಲ : ದ್ರಾವಿಡ್
ಕೊಲಂಬೊ : ನಮ್ಮ ತಂಡದ ಸದಸ್ಯರು ಸಣ್ಣವರಾಗಿರುವುದರಿಂದ ನಾನು ನಿರಾಸೆಗೊಳ್ಳುವುದಿಲ್ಲ. ಅವರು ಈ ರೀತಿಯ ಪರಿಸ್ಥಿತಿಗಳು ಮತ್ತು ಬೌಲಿಂಗ್ ಗುಣಮಟ್ಟಕ್ಕೆ ಒಡ್ಡಿಕೊಂಡಾಗ ಮಾತ್ರ ಕಲಿಯಲು ಸಾಧ್ಯ ಎಂದು ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ 20 ಸರಣಿಯಲ್ಲಿ ಭಾರತ ಮುಗ್ಗರಿಸಿದೆ. ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕೈಚೆಲ್ಲಿದೆ.
ಈ ಬಗ್ಗೆ ಮಾತನಾಡಿರುವ ಅವರು, ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖಗಳು ಅನುಭವಗಳಿಂದ ಕಲಿಯಬೇಕಿದೆ. ಕಡಿಮೆ ಸ್ಕೋರ್ ಮಾಡಿದ್ದ ಸಂದರ್ಭದಲ್ಲಿ ಯಾವ ರೀತಿ ಆಟ ಆಡಬೇಕು ಎಂಬ ಕಲೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ದ್ರಾವಿಡ್ ಹೇಳಿದ್ದಾರೆ.
ಅಲ್ಲದೆ ನಮ್ಮ ತಂಡದ ಸದಸ್ಯರು ಸಣ್ಣವರಾಗಿರುವುದರಿಂದ ನಾನು ನಿರಾಸೆಗೊಳ್ಳುವುದಿಲ್ಲ ಎಂದು ತಿಳಿಸಿದ ರಾಹುಲ್, ಈ ರೀತಿಯ ಪರಿಸ್ಥಿತಿಗಳು ಮತ್ತು ಬೌಲಿಂಗ್ ಗುಣಮಟ್ಟಕ್ಕೆ ಒಡ್ಡಿಕೊಂಡಾಗ ಮಾತ್ರ ಕಲಿಯಲು ಸಾಧ್ಯ. ಇನ್ನು ಶ್ರೀಲಂಕಾ ತಂಡದ ಬೌಲಿಂಗ್ ದಾಳಿಯು ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ ಎಂದಿದ್ದಾರೆ.