Laxman | ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಕೋಚ್
ಟಿ 20 ವಿಶ್ವಕಪ್ 2022 ರ ಸೆಮೀಸ್ ನಲ್ಲಿ ಸೋಲುಂಡ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ.
ಮೂರು ಟಿ 20, ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಗೆ ಪ್ರಯಾಣ ನಡೆಸಲಿದೆ.
ಈ ಪ್ರವಾಸಕ್ಕೆ ಸಿನಿಯರ್ ಪ್ಲೇಯರ್ ಗಳಾಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.
ಇದರಿಂದ ಟಿ 20 ಸರಣಿಗೆ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿಗೆ ಶಿಖರ್ ಧವನ್ ಸಾರಥ್ಯ ವಹಿಸಲಿದ್ದಾರೆ.
ನವೆಂಬರ್ 18 ರಿಂದ ಟಿ 20 ಸರಣಿ ಆರಂಭವಾಗಲಿದೆ.

ಇದಕ್ಕೂ ಮೊದಲು ಈ ಸರಣಿಯಿಂದ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ವಿಶ್ರಾಂತಿ ನೀಡಬೇಕು ಎಂದು ಬಿಸಿಸಿಐ ಯೋಚನೆ ಮಾಡಿದೆಯಂತೆ.
ಅದೇ ರೀತಿ ರಾಹುಲ್ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ತಾತ್ಕಲಿಕ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಗಳಿವೆ.
ಭಾರತ ಟಿ 20 ತಂಡ :
ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಇಶಾನ್ ಕಿಶನ್, ಶುಭ್ ಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ ಸನ್, ವಾಷಿಂಗ್ ಟನ್ ಸುಂದರ್, ಯುಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್, ಹಾರ್ಷಲ್ ಪಟೇಲ್, ಮೊಹ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅರ್ಷ್ ದೀಪ್ ಸಿಂಗ್, ಉಮ್ರಾನ್ ಮಲಿಕ್
ಏಕದಿನ ತಂಡ ಹೀಗಿದೆ
ಶಿಖರ್ ಧವನ್, ರಿಷಬ್ ಪಂತ್, ಶುಭ್ ಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ ಸನ್, ವಾಷಿಂಗ್ ಟನ್ ಸುಂದರ್, ಶರ್ದೂಲ್ ಠಾಕೂರ್, ಶಬಾಜ್ ಅಹ್ಮದ್, ಯುಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್, ಅರ್ಷ್ ದೀಪ್ ಸಿಂಗ್, ದೀಪಕ್ ಚಹಾರ್, ಕುಲ್ ದೀಪ್ ಸೇನ್, ಉಮ್ರಾನ್ ಮಲಿಕ್








