ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಗುರುಗಳು..!

admin by admin
June 11, 2021
in Newsbeat, Sports, ಕ್ರೀಡೆ
rahul dravid saakshatv team india
Share on FacebookShare on TwitterShare on WhatsappShare on Telegram

ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಗುರುಗಳು..!

rahul dravid team india saakshatvರಾಹುಲ್ ದ್ರಾವಿಡ್… ಒಬ್ಬ ಆಟಗಾರನಾಗಿ ಟೀಮ್ ಇಂಡಿಯಾದ ಗೋಡೆಯಾಗಿದ್ದರು. ವಿಶ್ವ ಕ್ರಿಕೆಟ್ ನಲ್ಲಿ ದಿ ಗ್ರೇಟ್ ವಾಲ್ ಅಂತನೇ ಫೇಮಸ್ ಆಗಿದ್ದರು. ಅದು ಟೆಸ್ಟ್ ಪಂದ್ಯವೇ ಇರಲಿ, ಏಕದಿನ ಪಂದ್ಯವೇ ಇರಲಿ.. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಮಾಡುತ್ತಿದ್ರೆ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಿರಾಳವಾಗಿರುತ್ತಿತ್ತು. ಆದ್ರೆ ಎದುರಾಳಿ ತಂಡ ಸುಸ್ತಾಗುತ್ತಿದ್ದವು. ಈಗ ಅದೆಲ್ಲಾ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.
ಇದೀಗ ರಾಹುಲ್ ದ್ರಾವಿಡ್ ಮಾಜಿ ಕ್ರಿಕೆಟಿಗ. ಹಾಗಂತ ಸುಮ್ಮನೆ ಕೂರಲಿಲ್ಲ. ಮನಸ್ಸು ಮಾಡಿದ್ರೆ ಎಸಿ ರೂಮ್ ನಲ್ಲಿ ಕುಳಿತುಕೊಂಡು ಆರಾಮವಾಗಿ ಕ್ರಿಕೆಟ್ ವೀಕ್ಷಣೆ ಮಾಡಿಕೊಂಡು ಇರಬಹುದಿತ್ತು. ಇಲ್ಲ ತನ್ನ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬಹುದಿತ್ತು.

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

ಆದ್ರೆ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಪ್ರೀತಿ ಮತ್ತು ಕ್ರಿಕೆಟ್ ಮೇಲಿನ ಬದ್ಧತೆ ಅವರನ್ನು ಸುಮ್ಮನೆ ಕೂರುವಂತೆ ಮಾಡಲಿಲಲ್ಲ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಕೋಚಿಂಗ್ ಹುದ್ದೆಯನ್ನು.
ಹಾಗೇ ನೋಡಿದ್ರೆ ರಾಹುಲ್ ದ್ರಾವಿಡ್ ಯಾವಾಗಲೋ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಬಹುದಿತ್ತು. ಹಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡಿಕೊಂಡು ಇರಬಹುದಿತ್ತು. ಆದ್ರೆ ದ್ರಾವಿಡ್ ಅದನ್ನು ಮಾಡಲಿಲ್ಲ.
rahul dravid saakshatv team indiaಬದಲಾಗಿ ದ್ರಾವಿಡ್ ಕಿರಿಯರ ತಂಡಕ್ಕೆ ಕೋಚಿಂಗ್ ನೀಡಲು ಶುರು ಮಾಡಿದ್ರು. 19 ವಯೋಮಿತಿ, ಭಾರತ ಎ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ರು. ಅವರ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನೆಡೆಸಿದ್ದರು.
ಅದರ ಫಲವೇ ಇವತ್ತಿನ ಬಲಿಷ್ಠ ಟೀಮ್ ಇಂಡಿಯಾ. ಅಷ್ಟೇ ಅಲ್ಲ ಏಕ ಕಾಲಕ್ಕೆ ಎರಡು ಬಲಿಷ್ಠ ತಂಡಗಳನ್ನು ಕಟ್ಟಲು ಬಿಸಿಸಿಐಗೆ ಸಾಧ್ಯವಾಯ್ತು. ಇದು ರಾಹುಲ್ ದ್ರಾವಿಡ್ ಹಿರಿಮೆ..
ಒಬ್ಬ ಕ್ರಿಕೆಟಿಗನಾಗಿ ತಾನು ಅನುಭವಿಸಿದ್ದ ಕಷ್ಟವನ್ನು ಈಗೀನ ಹುಡುಗರು ಪಡಬಾರದು ಅನ್ನೋ ದ್ರಾವಿಡ್ ಅವರ ಮನೋಭಾವನೆಯನ್ನು ಮೆಚ್ಚಲೇಬೇಕು. ತಾವು ಆಡುತ್ತಿರುವಾಗ ಆಧುನಿಕ ಸೌಲಭ್ಯಗಳು ಇರಲಿಲ್ಲ. ಫಿಟ್ ನೆಸ್ ಮಹತ್ವವೂ ಗೊತ್ತಿರಲಿಲ್ಲ. ಜಿಮ್ ನಲ್ಲಿ ಕಸರತ್ತು ನಡೆಸುತ್ತಿರಲಿಲ್ಲ. ಏನಿದ್ರೂ ನೆಟ್ಸ್ ನಲ್ಲಿ rahul dravid team india saakshatvಬೌಲಿಂಗ್ ಮಾಡಬೇಕು. ಬ್ಯಾಟಿಂಗ್ ತಾಲೀಮು ನಡೆಸಬೇಕು. ಮೈದಾನದಲ್ಲಿ ವ್ಯಾಯಮಕ್ಕಾಗಿ ಓಡಾಡಬೇಕಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಫಿಟ್ ನೆಸ್ ಮತ್ತು ಅವರ ತಯಾರಿಯನ್ನು ನೋಡಿಕೊಂಡು ಅಸೂಯೆ ಪಡಬೇಕಾಗಿತ್ತು. ಆದ್ರೆ ದ್ರಾವಿಡ್ ತನ್ನ ಗರಡಿಯಲ್ಲಿ ಪಳಗಿದ ಹುಡುಗರನ್ನು ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನಾಗಿ ರೂಪುಗೊಳ್ಳುವಂತೆ ಮಾಡಿದ್ದಾರೆ. ಇದೀಗ ವಿದೇಶಿಗರೇ ಟೀಮ್ ಇಂಡಿಯಾ ಆಟಗಾರರನ್ನು ನೋಡಿ ಅಸೂಯೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಅಂದ ಹಾಗೇ ರಾಹುಲ್ ದ್ರಾವಿಡ್ ಅವರಲ್ಲಿ ಇನ್ನೊಂದು ವಿಶೇಷತೆ ಇದೆ. 19 ವಯೋಮಿತಿ ಅಥವಾ ಭಾರತ ಎ ತಂಡ ಪ್ರವಾಸ ಮಾಡುವಾಗ 15 ಆಟಗಾರರು ಇರುತ್ತಿದ್ದರು. ಆದ್ರೆ ಆ ಪ್ರವಾಸದಲ್ಲಿ ತಂಡದಲ್ಲಿರುವ ಎಲ್ಲಾ ಆಟಗಾರರು ಪಂದ್ಯವನ್ನು ಆಡುತ್ತಿದ್ದರು. ಅವರಿಗೆ ಅವಕಾಶವನ್ನು ನೀಡುತ್ತಿದ್ದರು.
ಯಾಕಂದ್ರೆ ರಾಹುಲ್ ದ್ರಾವಿಡ್ ಗೆ ತಾನು ಆಡುತ್ತಿರುವಾಗ ಈ ರೀತಿಯ ಅನುಭವಗಳು ಆಗಿವೆ. ಅದೇ ರೀತಿ ಬೇರೆ ಆಟಗಾರರಿಗೂ ಆಗಿದೆ. ಆಟಗಾರನೊಬ್ಬ ಸರಣಿಗೆ ಆಯ್ಕೆಯಾಗಬೇಕಾದ್ರೆ ಆತ ದೇಶಿ ಪಂದ್ಯಗಳಲ್ಲಿ 700-800 ರನ್ ಗಳನ್ನು ದಾಖಲಿಸಬೇಕಿತ್ತು. ಕಷ್ಟಪಟ್ಟು ರನ್ ಗಳಿಸಿ ತಂಡಕ್ಕೆ rahul dravid team india saakshatvಆಯ್ಕೆಯಾದಾಗ ಆತನಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ. ಸರಣಿಯ ನಂತರ ಆತ ಮತ್ತೆ ದೇಶಿ ಪಂದ್ಯಗಳನ್ನು ಆಡಬೇಕು. ಆಗ ಆತನಿಗೆ ಅವಕಾಶ ಸಿಗೊತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ 15 ಆಟಗಾರರು ಬಲಿಷ್ಠವಾಗಿರುವಾಗ ಎಲ್ಲಾ ಆಟಗಾರರಿಗೂ ಅವಕಾಶ ನೀಡುವ ದ್ರಾವಿಡ್ ಅವರ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.
ಇದೀಗ ರಾಹುಲ್ ದ್ರಾವಿಡ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಗುರುವಾಗಿದ್ದಾರೆ. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿ ಜುಲೈ 13ರಿಂದ ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.
ತಂಡದಲ್ಲಿ ನಾಯಕ ಶಿಖರ್ ಧವನ್ ಬಿಟ್ಟು ಉಳಿದವರೆಲ್ಲಾ ಯುವ ಆಟಗಾರರೇ. ಹೆಚ್ಚಿನ ಆಟಗಾರರು ದ್ರಾವಿಡ್ ಗರಡಿಯಲ್ಲಿ ಪಳಗಿದವರೇ. ಹೀಗಾಗಿ ದ್ರಾವಿಡ್ ಅವರ ಮಾರ್ಗದರ್ಶನ ಟೀಮ್ ಇಂಡಿಯಾದ ಭವಿಷ್ಯದ ಆಟಗಾರರಿಗೆ ಮತ್ತೆ ಸಿಗಲಿದೆ.
ಒಟ್ಟಾರೆ, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಗೋಡೆ ಮಾತ್ರವಲ್ಲ. ಇದೀಗ ಪೌಂಡೇಷನ್ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಗೋಪುರವನ್ನು ಕಟ್ಟುತ್ತಿದ್ದಾರೆ. ಅದಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಕ್ರಿಕೆಟಿಗರನ್ನು ರೆಡಿ ಮಾಡುತ್ತಿದ್ದಾರೆ.

Tags: bccibengaluruCricketindiaindiranagarakarnatakanca head coachRahul DravidSportsteam indiaworld cricket
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram