ಬಿಜೆಪಿ ಅತ್ಯಾಚಾರ ಸಂತ್ರಸ್ತರನ್ನೇ ಹೊಣೆ ಮಾಡುತ್ತಿದೆ: ರಾಹುಲ್ ವಾಗ್ದಾಳಿ
ನವದೆಹಲಿ : ಬಿಜೆಪಿ ಅತ್ಯಾಚಾರ ಸಂತ್ರಸ್ತರನ್ನೇ ಕೃತ್ಯಕ್ಕೆ ಹೊಣೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮಧ್ಯಪ್ರದೇಶದಲ್ಲಿ 24 ವರ್ಷದ ಮಹಿಳೆಯೊಬ್ಬರ ಮೇಲೆ ನಡೆದ ಮಾರಕ ಹಲ್ಲೆ ಸಂಬಂಧ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಈ ರೀತಿಯಾದ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಘಟನೆ ನಡೆದು ಒಂದು ತಿಂಗಳು ಕಳೆದರೂ ಭೋಪಾಲ್ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಬಿಜೆಪಿ ಸದಾ ಅತ್ಯಾಚಾರ ಸಂತ್ರಸ್ತರನ್ನೇ ಘಟನೆಗೆ ಹೊಣೆ ಮಾಡುತ್ತಾ ಬಂದಿರುವುದೇ ಇದಕ್ಕೆ ಕಾರಣ. ಆರೋಪಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿ ,”ಇದು ಸರಕಾರದ ಬೇಟಿ ಬಚಾವೊ” ಎಂದು ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೋ’ ಆಂದೋಲನದ ಬಗ್ಗೆ ವ್ಯಂಗ್ಯವಾಡಿದ್ದಾರೆ.