ಇನ್ಮುಂದೆ ಡಿಜಿಲಾಕರ್ ನಲ್ಲೂ ಲಭ್ಯವಾಗುತ್ತೆ ನಿಮ್ಮ ಪಾಸ್ ಪೋರ್ಟ್..!
ನವದೆಹಲಿ: ಪಾಸ್ ಪೋರ್ಟ್ ಸೇವಾ ಯೋಜನೆಯ ಡಿಜಿಲಾಕರ್ ಪ್ಲಾಟ್ ಫಾರ್ಮ್ ಅನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉದ್ಘಾಟಿಸಿದೆ. ಡಿಜಿಲಾಕರ್ ಉದ್ಘಾಟಿಸಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ವಿ.ಮುರಳೀಧರನ್ ಅವರು ಪಾಸ್ ಪೋರ್ಟ್ ಸೇವೆಗಳಿಗೆ ಅಗತ್ಯವಿರುವ ದಾಖಲೆಗಳನ್ನು ಕಾಗದರಹಿತ ಮಾದರಿಯಲ್ಲಿ ಸಲ್ಲಿಸಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದಾಗಿ ಮೂಲ ದಾಖಲೆಗಳನ್ನು ಕೊಂಡೊಯ್ಯಲೇಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಾನೂನು ವಿರೋಧಿ ಪೋಸ್ಟ್ ಗಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ..!
ಪಾಸ್ ಪೋರ್ಟ್ ಸೇವಾ ಯೋಜನೆ ದೇಶದಲ್ಲಿ ಪಾಸ್ ಪೋರ್ಟ್ ಸೇವೆ ಗಳನ್ನು ಒದಗಿಸುವಲ್ಲಿ ಮಹತ್ತರ ಬದಲಾವಣೆ ತಂದಿದೆ. 2017ರಲ್ಲಿ ಮೊದಲ ಬಾರಿಗೆ ಅರ್ಜಿಗಳ ಮಾಸಿಕ ಸಲ್ಲಿಕೆ ಒಂದು ಮಿಲಿಯನ್ ದಾಟಿದೆ. ಪಾಸ್ ಪೋರ್ಟ್ ಸೇವಾ ಯೋಜನೆ ಮೂಲಕ ಈವರೆಗೆ 7 ಕೋಟಿಗೂ ಹೆಚ್ಚು ಪಾಸ್ ಪೋರ್ಟ್ ವಿತರಿಸಲಾಗಿದೆ ಎಂದು ಹೇಳಿದರು.
2,000 ಉದ್ಯೋಗಕ್ಕೆ ಕತ್ತರಿ ಹಾಕಲು ಹೊರಟ ಜಾಗ್ವಾರ್ ಲ್ಯಾಂಡ್ ರೋವರ್
ಇದರಲ್ಲಿ 36 ಪಾಸ್ ಪೋರ್ಟ್ ಕಚೇರಿಗಳು ಹಾಗೂ 93 ಪಾಸ್ ಪೋರ್ಟ್ ಸೇವಾ ಕೇಂದ್ರಗಳೊಂದಿಗೆ ಸೇರಿ ಒಟ್ಟು 555 ಪಾಸ್ ಪೋರ್ಟ್ ಕಚೇರಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ನಾಗರಿಕ ಕೇಂದ್ರಿತ ಧೋರಣೆಗೆ ಮತ್ತಷ್ಟು ಉತ್ತೇಜನ ನೀಡಲು ಮತ್ತು ಕಾಗದರಹಿತ ವಿಧಾನದಲ್ಲಿ ಪಾಸ್ ಪೋರ್ಟ್ ಸೇವಾ ಅನುಭವವನ್ನು ಹೆಚ್ಚಿಸಲು, ನಾವು ಈಗ ಯಶಸ್ವಿಯಾಗಿ ಸರ್ಕಾರದ ಡಿಜಿಲಾಕರ್ ಪ್ಲಾಟ್ ಫಾರ್ಮ್ ನಲ್ಲಿ ವಿಲೀನಗೊಳಿಸಿದ್ದೇವೆ ಎಂದು ಹೇಳಿದರು. ಒಟ್ಟಾರೆ ಪಾಸಪೋರ್ಟ್ ಗಳು ಕಳೆದುಹೋಗುವುದು ಸೇರಿ ಅನೇಕ ತೊಂದರೆಗಳ ತಪ್ಪಿಸುವ ಜೊತೆಗೆ ನಾಗರಿಕರ ಕೆಲಸ ಮತಷ್ಟು ಸುಲಭವನ್ನಾಗಿಸುವಲ್ಲಿ ಈ ಕ್ರಮ ಸಹಕಾರಿಯಾಗಲಿದೆ.