2,000 ಉದ್ಯೋಗಕ್ಕೆ ಕತ್ತರಿ ಹಾಕಲು ಹೊರಟ ಜಾಗ್ವಾರ್ ಲ್ಯಾಂಡ್ ರೋವರ್
ಲ್ಯಾಂಡ್ ರೋವರ್ ಜಾಗತಿಕ ಮಟ್ಟದಲ್ಲಿ 2,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಹೌದು ಜಗತ್ತಿನ ಐಷಾರಾಮಿ ಕಾರುಗಳಲ್ಲಿ ಒಂದಾದ ಜಾಗ್ವಾರ್ ಬ್ರಾಂಡ್ 2025ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಲಿದೆ. ಈ ಮೂಲಕ ಜಾಗ್ವಾರ್ನ ಎಲ್ಲಾ ಬ್ರ್ಯಾಂಡ್ ಕಾರುಗಳು ಎಲೆಕ್ಟ್ರಿಕ್ ಆಗಿ ಪರಿವರ್ತನೆಗೊಂಡು 2030 ರ ವೇಳೆಗೆ ಸಂಪೂರ್ಣ ಮಾದರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.
ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಬಲಿ : ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ..!
ಟಾಟಾ ಸಮೂಹದ ಅಂಗಸಂಸ್ಥೆಯಾದ ಜಾಗ್ವಾರ್ ಇದೀಗ 2,000 ಉದ್ಯೋಗಿಗಳಿಗೆ ಕೋಕ್ ನೀಡಲು ಮುಂದಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಸಂಘಟನೆಯ ಸಂಪೂರ್ಣ ಪರಿಶೀಲನೆ ಈಗಾಗಲೇ ನಡೆಯುತ್ತಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಟಾಟಾ ಮೋಟಾರ್ಸ್ ಒಡೆತನದ ಜೆಎಲ್ ಆರ್ ತನ್ನ ಲ್ಯಾಂಡ್ ರೋವರ್ ಬ್ರಾಂಡ್ ಮುಂದಿನ ಐದು ವರ್ಷಗಳಲ್ಲಿ ಆರು ಸಂಪೂರ್ಣ ವಿದ್ಯುತ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ.
ಗಲ್ವಾನ್ ಘರ್ಷಣೆಯಲ್ಲಿ ಚೀನಾ ಸೈನಿಕರು ಸಾವು: ಮೊದಲ ಬಾರಿಗೆ ಅಧಿಕೃತವಾಗಿ ಅಂಗೀಕರಿಸಿದ ಚೀನಾ
ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ ಸಂಬಳ ಪಡೆಯುವ ನಮ್ಮ ಉದ್ಯೋಗಿಗಳಲ್ಲಿ ಸುಮಾರು 2,000 ಜನರ ಉದ್ಯೋಗ ಕಡಿತವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಕಂಪನಿಯು ಹೇಳಿಕೊಂಡಿದೆ.