ಕಾನೂನು ವಿರೋಧಿ ಪೋಸ್ಟ್ ಗಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ..!
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇನ್ಮುಂದೆ ಕಾನೂನೂ ವಿರೋಧಿ ಪೋಸ್ಟ್ ಗಳು ಪ್ರಚೋದನಾಕಾರಿ ಪೋಸ್ಟ್ ಗಳನ್ನ ಹಾಕುವವರು ಹುಷಾರಾಗಿರಬೇಕು ಇಲ್ಲದೇ ಇದ್ರೆ ಕಾನೂನಿನ ಉಲ್ಲಂಘನೆಯ ಅಡಿ ಶಿಕ್ಷೆಯಾಗಬಹುದು. ಏಕೆಂದರೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮೂಗುದಾರ ಹಾಕಲು ರಣತಂತ್ರ ಹೆಣೆಯುತ್ತಿದೆ ಕೇಂದ್ರ ಸರ್ಕಾರ.
ಸರ್ಕಾರ ಹೊಸ ನೀತಿಗಳ ಜಾರಿಗೆ ಚಿಂತನೆ ನಡೆಸಿದೆ. ಈ ನಿಯಮಗಳ ಅನ್ವಯ, ಸರ್ಕಾರ ಅಥವ ನ್ಯಾಯಾಲಯದ ಕೋರಿಕೆಯ ಮೇರೆಗೆ 36 ಗಂಟೆಗಳ ಒಳಗೆ ಅಕ್ರಮ ಪೋಸ್ಟ್ಗಳನ್ನ ತಮ್ಮ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಬೇಕಾಗುತ್ತೆ. ಇಂತಹ ಕಾಯ್ದೆ ತರುವ ಮೂಲಕ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಗೂಗಲ್ ಕಂಪನಿಗಳನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ಲಾನ್ ಮಾಡಿದೆ ಸರ್ಕಾರ.
ಜೊತೆಗೆ ಈ ಕಾಯ್ದೆ ಮೂಲಕ ಬಳಕೆದಾರರ ಕೋರಿಕೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲು ಸಾಮಾಜಿಕ ಮಾಧ್ಯಮಗಳಿಗೆ ಕೆಲವೊಂದು ನಿಯಗಳನ್ನ ಜಾರಿಗೊಳಿಸಲಾಗುವುದು ಎನ್ನಲಾಗುತ್ತಿದೆ. ಈ ಹೊಸ ನಿಯಮದ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನ ಹೊಂದಿರುವ ಕಂಪನಿ ಭಾರತದಲ್ಲಿಯೂ ತನ್ನ ಕಚೇರಿಯನ್ನ ತೆರೆಯಬೇಕು. ಅಲ್ಲದೆ, ಈ ಕಂಪನಿಗಳು ನೋಡಲ್ ಅಧಿಕಾರಿಯನ್ನ ನೇಮಿಸಬೇಕಾಗುತ್ತೆ. ಇದರಿಂದ ಅಗತ್ಯವಿದ್ದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅವರನ್ನ ಸಂಪರ್ಕಿಸಬಹುದು.
2,000 ಉದ್ಯೋಗಕ್ಕೆ ಕತ್ತರಿ ಹಾಕಲು ಹೊರಟ ಜಾಗ್ವಾರ್ ಲ್ಯಾಂಡ್ ರೋವರ್
ಮಾಹಿತಿ ತಂತ್ರಜ್ಞಾನ ಮಧ್ಯವರ್ತಿಗಳ ಮಾರ್ಗಸೂಚಿ ನಿಯಮಗಳು, 2011ರ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಪ್ಲ್ಯಾಟ್ ಫಾರ್ಮ್ಗಳಿಂದ ಅಕ್ರಮ ವಿಷಯವನ್ನ ತೆಗೆದುಹಾಕುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದರಬೇಕು. ಐಟಿ ಕಾಯ್ದೆಯ ಸೆಕ್ಷನ್ 79 ಮಧ್ಯವರ್ತಿಗಳಿಗೆ ಅಂತಹ ಅವಕಾಶವನ್ನ ಒದಗಿಸುತ್ತದೆ.
ಈ ತಿದ್ದುಪಡಿಗಳನ್ನು ಸೂಚಿಸಿದ ನಂತರ ಜಾರಿಗೆ ತರಲಾಗುವುದು. ಒಂದು ಸಾಮಾಜಿಕ ಮಾಧ್ಯಮ ಕಂಪನಿಯು ನ್ಯಾಯಾಲಯದಿಂದ ಅಥವಾ ಸರ್ಕಾರದಿಂದ ಆದೇಶವನ್ನ ಪಡೆದರೆ, ಅವರು 36 ಗಂಟೆಗಳ ಒಳಗೆ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ ಪಾರ್ಮ್ ನಿಂದ ಆ ಪೋಸ್ಟ್ ತೆಗೆದುಹಾಕಬೇಕಾಗುದು ಕಡ್ಡಾಯ ಮತ್ತು ಅನಿವಾರ್ಯವಾಗಿರುತ್ತೆ. ಇಂತಹ ಕಾನೂನನ್ನ ಜಾರಿಗೆ ತರುವ ಯೋಜನೆಯನ್ನ ಸರ್ಕಾರ ಹೊಂದಿದೆ ಎನ್ನಲಾಗಿದೆ. ಇದಲ್ಲದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಗಳನ್ನ ಹಾಕಿದ್ರೆ ಅವುಗಳನ್ನ ತೆಗೆದುಹಾಕಬೇಕು. ಇಲ್ಲ ಅದು ಗಂಭೀರವಾಗಿದ್ದಲ್ಲಿ ಪೋಸ್ಟ್ ಹಾಕಿದವರ ಮೇಲೂ ಕ್ರಮ ಕೈಗೊಳ್ಳಬಹುದು ಎನ್ನಲಾಗ್ತಿದೆ.