ಕೋವಿಡ್ ಸಂಕಷ್ಟದ ನಡುವೆಯೂ ‘ಸೆಂಟ್ರಲ್ ವಿಸ್ತಾ ಯೋಜನೆ’ ಕಾಮಗಾರಿ ಆರಂಭಿಸಿದ ಕೇಂದ್ರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ
ನವದೆಹಲಿ : ಒಂದೆಡೆ ದೇಶದಲ್ಲಿ ಕೋವಿಡ್ 2ನೇ ಅಲೆ ಅತಿ ಭೀಕರವಾಗಿದ್ದು, ನಿತ್ಯ ಸಾವಿರಾರು ಮಂದಿ ಜೀವ ಕಳೆದುಕೊಳ್ತಿದ್ದಾರೆ. ಆಕ್ಸಿಜನ್ ಕೊರತೆ , ಬೆಡ್ ಕೊರತೆ ಇದೆ.. ಆದ್ರೆ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸೆಂಟ್ರಲ್ ವಿಸ್ತಾ ಯೋಜನೆಯತ್ತಲೇ ಗಮನವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಣಿ ಟ್ವೀಟ್ ಗಳನ್ನ ಮಾಉವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೋನ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ನಡುವೆ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿಯನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನದಿಯಲ್ಲಿ ಅಸಂಖ್ಯಾತ ಮೃತದೇಹಗಳು ತೇಲಿ ಬರುತ್ತಿವೆ. ಆಸ್ಪತ್ರೆಗಳ ಎದುರು ಮೈಲುಗಟ್ಟಲೆ ಸರತಿ ಸಾಲಿದೆ. ಬದುಕುವ ಹಕ್ಕಿನ ಭದ್ರತೆ ಇಲ್ಲದಾಗಿದೆ.. ಪ್ರಧಾನಿ ಅವರು ತನ್ನ ಪಿಂಕ್ ಕನ್ನಡಕವನ್ನು ತೆಗೆಯದೇ ಇದ್ದರೆ, ಸೆಂಟ್ರಲ್ ವಿಸ್ತಾ ಹೊರತುಪಡಿಸಿ ಬೇರೇನೂ ಕಾಣಿಸದು’ ಎಂದು ಕಿಡಿಕಾರಿದ್ದಾರೆ.








