Rahul Gandhi : ಎತ್ತಿನ ಗಾಡಿ ಮೇಲೆ ಸವಾರಿ ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿಯ ನಾಯಕತ್ವದಲ್ಲಿ ದೇಶಾದ್ಯಂತ ತನ್ನ ಛಾಪನ್ನು ಕಳೆದು ಕೊಂಡ ಕೈ ಪಕ್ಷ ಜನ ಸಾಮಾನ್ಯರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಕಡೆ ಸೆಳೆಯಲು ಉದ್ದೇಶಿಸಿದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಇದು ಬರುವ ಫೆಬ್ರವರಿ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದು ಒಟ್ಟಾರೆ 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ.
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 5 ರಂದು ರಾಜಸ್ಥಾನವನ್ನು ಪ್ರವೇಶಿಸಿತು.
ಸದ್ಯ ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಏಳನೇ ದಿನವಾದ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಟಾ ಖುರ್ದ್ ಗ್ರಾಮದಿಂದ ಸವಾಯಿ ಮಾಧೋಪುರಕ್ಕೆ ಎತ್ತಿನ ಬಂಡಿಯಲ್ಲಿ ತೆರಳಿದರು. ನಂತರ ಹಿಮಾಚಲ ಪ್ರದೇಶದಲ್ಲಿ ತಮ್ಮ ಪಕ್ಷದ ಸರ್ಕಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಹುಲ್ ಶಿಮ್ಲಾಗೆ ಪ್ರಯಾಣಿಸಿದರು. ರಾಹುಲ್ ಗಾಂಧಿ ಡಿಸೆಂಬರ್ 18 ರಂದು ಅಲ್ವಾರ್ ಬಳಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಡಿಸೆಂಬರ್ 21 ರಂದು ಹರಿಯಾಣವನ್ನು ಪ್ರವೇಶಿಸಲಿದೆ








