‘ಅಗತ್ಯವಿಲ್ಲದ ಯೋಜನೆಗಳಿಗೆ ಖುರ್ಚು ಮಾಡುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಸಿ’..!
ನವದೆಹಲಿ : ಅನಗತ್ಯ ಯೋಜನೆಗಳಿಗೆ ವ್ಯಯಿಸುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಕೆ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಿಆರ್ ಹಾಗೂ ಇನ್ನಿತರೆ ಅನಗತ್ಯ ಯೋಜನೆಗಳ ಬದಲಿಗೆ ಕೊರೋನಾ ಲಸಿಕೆ, ಆಯಕ್ಸಿಜನ್ ಹಾಗೂ ಇನ್ನಿತರೆ ಆರೋಗ್ಯ ಸೇವೆಗಳಿಗೆ ಹಣ ಖರ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಾಂತಿಯುತವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಪರಿಸ್ಥಿತಿ ಎದುರಿಸಲು ದೇಶ ಸಜ್ಜಾಗಿರಬೇಕಿದೆ. ಪ್ರಸ್ತುತದ ಪರಿಸ್ಥಿತಿ ಅಸಹನೀಯವಾಗಿದೆ ಎಂದು ಹೇಳಿದ್ದಾರೆ.