ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಕುರಿತು ಭಾರೀ ವಾದ- ವಿವಾದ ಕೇಳಿ ಬರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. ಮಣಿಪುರವನ್ನು ಮಾತ್ರ ಕೊಲ್ಲಲಾಗಿಲ್ಲ, ಮಣಿಪುರದಲ್ಲಿ ಭಾರತಮಾತೆಯನ್ನು ಕೊಲ್ಲಲಾಗಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಿಡಿಸಿದ್ದಾರೆ.
ಮಣಿಪುರಕ್ಕೆ ಭೇಟಿ ನೀಡದ ಪ್ರದಾನಿ ಮೋದಿ ಅವರು ಮಣಿಪುರವನ್ನು ದೇಶದ ಅವಿಭಾಜ್ಯ ಅಂಗವಾಗಿ ನೋಡುತ್ತಿಲ್ಲ ಎಂದು ಹೇಳಿದ್ದಾರೆ. ಲೋಕಸಭೆಯಿಂದ ಹೊರಹೋಗುವ ವೇಳೆ ಅವಿಶ್ವಾಸ ನಿರ್ಣಯದ ಕಿರತು ಮಾತನಾಡುವಾಗ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂಬುದು ರಾಹುಲ್ ಗಾಂಧಿ ವಿರುದ್ಧ ಆರೋಪ ಕೇಳಿ ಬಂದಿದೆ.
ಕೆಲವು ಮಹಿಳಾ ಸಂಸದರ ಜತೆಗೂಡಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡಿದ್ದರು. ಇದುವರೆಗೆ ಯಾರೂ ಮಹಿಳೆಯರ ಮೇಲೆ ಇಂತಹ ಕೃತ್ಯ ಎಸಗಿಲ್ಲ ಎಂದು ದೂರಿದರು. ಹೆಂಗಸರು ಕುಳಿತ ಕಡೆ ಕೈ ತೋರಿಸಿ ಫ್ಲೈಯಿಂಗ್ ಕಿಸ್ ಬಿಟ್ಟರೆ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ತೋರಿಸುತ್ತದೆ ಎಂದು ಸ್ಮೃತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಫ್ಲೈಯಿಂಗ್ ಕಿಸ್ ಆರೋಪವನ್ನು ನಿರಾಕರಿಸುತ್ತಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿ ಖಜಾನೆ ಬೆಂಚುಗಳ ಕಡೆಗೆ ತೋರಿಸಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.








