ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನ : ಮಲ್ಲಿಕಾರ್ಜುನ್ ಖರ್ಗೆ
ಬೆಳಗಾವಿ : ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನವಾಗಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಉಪಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ತೊಡಗಿಕೊಂಡಿರುವ ಮಲ್ಲಿಕಾರ್ಜುನ್ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿಯೂ ಎಲ್ಲರ ಕೈ ಹಿಡಿದಿದ್ದಾರೆ.
ತಮಿಳುನಾಡಿನಲ್ಲಿ ಎಐಎಡಿಂಕೆ ಕೈ ಹಿಡಿದಿಲ್ವ ಎಂದು ಪ್ರಹ್ಲಾದ್ ಜೋಶಿಯ ಕಾಂಗ್ರೆಸ್ ಗೆ ಯಾವುದೇ ಸ್ಟ್ಯಾಂಡ್ ಇಲ್ಲ ಎಂಬ ಹೇಳಿಕೆಗೆ ಟಾಂಗ್ ನೀಡಿದರು.
ಇನ್ನು ಅಲೈಯನ್ಸ್ ಮಾಡೋದು ತಪ್ಪಲ್ಲ. ಸಂವಿಧಾನ ರಕ್ಷಣೆ, ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ ಖರ್ಗೆ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಬಂದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿ ಅವರು ಬರಲಿಲ್ಲ ಅಂದ್ರೆ ಬಂದಿಲ್ಲ ಅಂತೀರಿ, ಬಂದ್ರೆ ಬಂದಿದ್ದೀರಿ ಅಂತೀರಿ. ಇದನ್ನು ನೋಡಿದ್ರೆ ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ ಬರ್ತಾರೆ ಅಂತಾ ಅರ್ಥ ಅಲ್ವೇ ಎಂದು ಬಿಜೆಪಿಗರ ಕಾಲೆಳೆದರು.
ಇದೇ ವೇಳೆ ಬೆಳಗಾವಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಭಾರತೀಯ ಸಂಸ್ಕøತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಸಮಾಜಕ್ಕೆ ಬಸವಣ್ಣನವರು ಮಾಡಿದ ಕೆಲಸವನ್ನು ಸತೀಶ್ ಜಾರಕಿಹೊಳಿ ಇಂದು ಸಂವಿಧಾನ ಬದ್ಧವಾಗಿ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.