‘ಜನ್ ಕಿ ಬಾತ್’ ಮುಖ್ಯ ‘ಮನ್ ಕಿ ಬಾತ್’ ಅಲ್ಲ – ರಾಹುಲ್ ಗಾಂಧಿ
ನವದೆಹಲಿ : ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಹಾಗೂ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ. ಈಗ ‘ಜನ್ ಕಿ ಬಾತ್’ ಮುಖ್ಯ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಮತ್ತೊಮ್ಮೆ ಆಕ್ರೊಶ ಹೊರಹಾಕಿದ್ದಾರೆ.
ಹೌದು ಇಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾಸ್ ಮಾಸಿಕ ಕಾರ್ಯಕ್ರಮದ ಬೆನ್ನಲ್ಲೇ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಅವರು ಕೋವಿಡ್ -19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಿಂದಾಗಿ ಕಷ್ಟದಲ್ಲಿರುವ ದೇಶದ ನಾಗರಿಕರಿಗೆ ಸಹಾಯ ನೀಡುವುದು ಪಕ್ಷದ ಕರ್ತವ್ಯವಾಗಿದೆ.
ಕೋವಿಡ್ ಸೊಂಕಿನಿಂದ ದೇಶ ತತ್ತರಿಸಿ ಹೋಗಿದೆ. ಜನ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ‘ವ್ಯವಸ್ಥೆ ವಿಫಲವಾಗಿದೆ, ಆದ್ದರಿಂದ ಜನ್ ಕಿ ಬಾತ್ ಮಾಡುವುದು ಮುಖ್ಯ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮನ್ ಕಿ ಬಾತ್ ಕಾರ್ಯಕ್ರಮದ ವಿರುದ್ಧ ಟೀಕೆ ಮಾಡಿದ್ದಾರೆ.
ಈ ಬಿಕ್ಕಟ್ಟಿನಲ್ಲಿ ದೇಶಕ್ಕೆ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ಎಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ಕೈ ಬಿಡುವಂತೆ ನಾನು ವಿನಂತಿಸುತ್ತೇನೆ. ಕೋವಿಡ್ ಪರಿಸ್ಥಿತಿಯಿಂದಾಗಿ ಕಷ್ಟದಲ್ಲಿರುವವರಿಗೆ ಎಲ್ಲರೂ ಸಹಾಯವನ್ನು ನೀಡಿ ಮತ್ತು ನಮ್ಮ ದೇಶದ ಜನರ ನೋವನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.








