‘ಡೆಲ್ಟಾ ಪ್ಲಸ್’ ಹರಡುವಿಕೆ ತಡೆಗೆ ತೆಗೆದುಕೊಂಡ ಕ್ರಮಗಳೇನು..? ಕೇಂದ್ರಕ್ಕೆ ಪ್ರಶ್ನಿಸಿದ ರಾಹುಲ್ ಗಾಂಧಿ
ಕೊರೊನಾ ವೈರಸ್ ದೇಶದಲ್ಲಿ ಹರಡಲು ಆರಂಭವಾದಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತತವಾಗಿ ಕೇಂದ್ರ ಸರ್ಕಾರ , ಪ್ರದಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ, ಸಾಮಾಜಿಕ ಜಾಲತಾಣದ ಮೂಲಕ ಾರೋಪಗಳನ್ನ ಮಾಡುತ್ತಲೇ ಬಂದಿದ್ದಾರೆ.. ಕೋವಿಡ್ ನಿಯಂತ್ರಣ , ವ್ಯಾಕ್ಸಿನ್ ಹಂಚಿಕೆ ವಿಚಾರದಲ್ಲಿ ರಾಹುಲ್ ಗಾಂಧಿ ಕೇಂದ್ರದ ನಡೆಯನ್ನ ಖಂಡಿಸುತ್ತಲೇ ಬಂದಿದ್ದಾರೆ..
ಇದೀಗ ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರ ಹರಡುವಿಕೆ ತಡೆಗೆ ಕೈಗೊಂಡ ಕ್ರಮಗಳೇನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಡೆಲ್ಟಾ ಪ್ಲಸ್ ರೂಪಾಂತರ ಕುರಿತು ಮೋದಿ ಸರ್ಕಾರಕ್ಕೆ ಪ್ರಶ್ನೆಗಳು ಎಂದು ಟ್ವೀಟ್ ಮಾಡಿರುವ ಅವರು, ‘ರೂಪಾಂತರ ವೈರಸ್ ಪರೀಕ್ಷಿಸಲು ಮತ್ತು ಅದರ ಹರಡುವಿಕೆ ತಡೆಯಲು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಯನ್ನು ಏಕೆ ಮಾಡಲಾಗುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಡೆಲ್ಟಾ ಪ್ಲಸ್ ವೈರಸ್ ಮೇಲೆ ಲಸಿಕೆಗಳು ಎಷ್ಟು ಪರಿಣಾಮಕಾರಿ ಮತ್ತು ಈ ಕುರಿತ ಪೂರ್ಣ ಮಾಹಿತಿ ಯಾವಾಗ ಲಭ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.