ರಾಹುಲ್ ಗಾಂಧಿ 52ನೇ ಹುಟ್ಟುಹಬ್ಬ; ಅಗ್ನಿಪಥ್ ಪ್ರತಿಭಟನೆ ಹಿನ್ನಲೆ ಆಚರಿಸಿಕೊಳ್ಳದಿರಲು ನಿರ್ಧಾರ ..
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಗಾಂಧಿ 19 ಜೂನ್ 1970 ರಂದು ದೆಹಲಿಯಲ್ಲಿ ಜನಿಸಿದರು.
ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಯುವ ಜನತೆ ಪ್ರತಿಭಟನೆ ನಡೆಸುತ್ತಿರುವುದಕರಿಂದ ಯಾವುದೇ ರೀತಿಯ ಹುಟ್ಟುಹಬ್ಬವನ್ನು ಆಚರಿಸದಂತೆ ಕಾಂಗ್ರೆಸ್ ಕಾರ್ಯಕರ್ತರನ್ನ ರಾಹುಲ್ ಗಾಂಧಿ ಕೋರಿದ್ದಾರೆ. ಇದಕ್ಕೂ ಮೊದಲು, ಕರೋನಾ ಮತ್ತು ಮಿಲ್ಕಾ ಸಿಂಗ್ ಅವರ ಸಾವಿನಿಂದಾಗಿ ಅವರು ತಮ್ಮ 50 ನೇ ಮತ್ತು 51 ನೇ ಹುಟ್ಟುಹಬ್ಬವನ್ನ ಆಚರಿಕೊಳ್ಳದಿರಲು ನಿರ್ಧರಿಸಿದ್ದರು.
ಅಗ್ನಿಪಥ’ ಯೋಜನೆ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ನಿಲ್ಲಬೇಕು” “ದೇಶದಲ್ಲಿ ಸದ್ಯದ ಪರಿಸ್ಥಿತಿ ಚಿಂತಾಜನಕವಾಗಿವೆ. ಕೋಟ್ಯಂತರ ಯುವಕರು ವೇದನೆಯಲ್ಲಿದ್ದಾರೆ. ನಾವು ನೊಂದ ಯುವಕರ ಮತ್ತು ಅವರ ಕುಟುಂಬಸ್ಥರ ನೋವು ಹಂಚಿಕೊಂಡು ಅವರೊಂದಿಗೆ ನಿಲ್ಲಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಎದುರಿಸುತ್ತಿರುವ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅನಾರೋಗ್ಯ ಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ದಿನಗಳ ವಿಶ್ರಾಂತಿಗೆ ಅವಕಾಶ ನೀಡಿದ್ದರಿಂದ ಸೋಮವಾರ ಮತ್ತೆ ಇಡಿ ವಿಚಾರಣೆ ಎದುರಿಸಲಿದ್ದಾರೆ.








