50ನೇ ವಯಸ್ಸಿನಲ್ಲಿ ತಂಗಿಯನ್ನ ಚುಂಬಿಸಿದ್ದ ಪಾಂಡವ ಯಾರು ? ರಾಹುಲ್ ಗೆ U P ಸಚಿವನ ಪ್ರಶ್ನೆ…
50 ನೇ ವಯಸ್ಸಿನಲ್ಲಿ ಪಾಂಡವರಲ್ಲಿ ಯಾವ ಪಾಂಡವ ತಮ್ಮ ಸಹೋದರಿಯನ್ನ ಚುಂಬಿಸಿದ್ದ ? ಎಂದು ಉತ್ತರ ಪ್ರದೇಶ ಸಚಿವ ದಿನೇಶ್ ಪ್ರತಾಪ್ ಸಿಂಗ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ RSS ಅನ್ನು 21ನೇ ಶತಮಾನದ ಕೌರವರು ಎಂದು ಟೀಕಿಸಿದಕ್ಕೆ ಪ್ರತಿಯಾಗಿ ಈ ಹೇಳಿಕೆ ಬಂದಿದೆ. ರಾಹುಲ್ ಹೇಳಿಕೆಗೆ ದಿನೇಶ್ ಪ್ರತಾಪ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ರಾಹುಲ್ ತಮ್ಮ ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಸಭೆಯೊಂದರಲ್ಲಿ ಮುದ್ದಾಡಿದ್ದು ಗೊತ್ತೇ ಇದೆ. ಎಂದು ದಿನೇಶ್ ಪ್ರತಾಪ್ ಸಿಂಗ್ ನೆನಪಿಸಿದ್ದಾರೆ.
ಆರೆಸ್ಸೆಸ್ ಎಂದರೆ ಕೌರವರು ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಹಾಗಾದರೆ ರಾಹುಲ್ ಗಾಂಧಿ ಪಾಂಡವರಾ? ರಾಹುಲ್ ಅವರು ಪಾಂಡವರೆಂದು ಭಾವಿಸಿದರೆ, ದ್ವಾಪರ ಯುಗದಲ್ಲಿ ಯಾವ ಪಾಂಡವರು ತಮ್ಮ 50 ನೇ ವಯಸ್ಸಿನಲ್ಲಿ ಸಾರ್ವಜನಿಕ ಸಭೆಯಲ್ಲಿ ತಮ್ಮ ಸಹೋದರಿಯನ್ನು ಚುಂಬಿಸಿದರು?” ಎಂದು ದಿನೇಶ್ ಪ್ರತಾಪ್ ಸಿಂಗ್ ಪ್ರಶ್ನಿಸಿದರು. ಈ ರೀತಿ ಚುಂಬಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲ ಎಂದರು. ಇಂತಹ ನಡವಳಿಕೆಯನ್ನು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ ಎಂದರು.
ದಿನೇಶ್ ಪ್ರತಾಪ್ ಸಿಂಗ್, 2019 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸೋತಿದ್ದರು. 2024ರಲ್ಲಿ ಸೋನಿಯಾ ಗಾಂಧಿ ಗೆಲ್ಲುವುದಿಲ್ಲ ಎಂದು ಸಚಿವ ಹೇಳಿದ್ದಾರೆ.
Rahul gandi : Who is the Pandava who kissed his sister at the age of 50? UP Minister’s question to Rahul