ಪರ್ಥ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (Test Cricket) ಕನ್ನಡಿಗ ಕೆ.ಎಲ್. ರಾಹುಲ್ ಗೆ ಮಹಾ ಮೋಸವಾಗಿದೆ.
ಮೊದಲ ಬ್ಯಾಟ್ ಮಾಡಿದ ಭಾರತ (Team India) 32 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್ ನಿಧಾನವಾಗಿ ಬ್ಯಾಟ್ ಬೀಸಲು ಮುಂದಾದರು. ಅಲ್ಲದೇ, ಇನ್ನೊಂದೆಡೆ ಉತ್ತಮವಾಗಿ ಆಟವಾಡುತ್ತಿದ್ದರು. ಈ ವೇಳೆ ರಾಹುಲ್ ಬಾಲನ್ನು ತಡೆಯಲು ಯತ್ನಿಸಿದಾಗ ಬಾಲ್ ಬ್ಯಾಟ್ನ ಎಡ್ಜ್ ಬಳಿ ಸಾಗಿ ವಿಕೆಟ್ ಕೀಪರ್ ಕೈ ಸೇರಿತು.
ಆಗ ಆಸ್ಟ್ರೇಲಿಯಾದ (Australia) ಆಟಗಾರರು ಔಟ್ ಗೆ ಮನವಿ ಸಲ್ಲಿಸಿದರೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಹೀಗಾಗಿ ಆಸೀಸ್ ಆಟಗಾರರು ಡಿಆರ್ಎಸ್ (DRS) ಮನವಿ ಮಾಡಿದರು. ಚೆಂಡು ಬ್ಯಾಟ್ಗೆ ತಾಗಿದೆಯೇ ಅಥವಾ ಪ್ಯಾಡ್ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತ ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಹೀಗಾಗಿ ಈ ನಿರ್ಧಾರಕ್ಕೆ ರಾಹುಲ್ ವಿರೋಧ ವ್ಯಕ್ತಪಡಿಸಿದರು.
ನಂತರ ರಿಪ್ಲೈ ನೋಡಿದಾಗ ಪ್ಯಾಡಿಗೆ ಬ್ಯಾಟ್ ಬಡಿದಿರುವುದು ಗೊತ್ತಾಗಿದೆ. ಇದರಿಂದಾಗಿ ಭಾರತೀಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.








