Rahul Ramakrishna | ಯೂ ಫೂಲ್ಸ್ ಅದು ಜೋಕ್ ಅಷ್ಟೆ rahul-ramakrishna-u-turn saaksha tv
ಜಾತಿ ರತ್ನಾಲು ಸಿನಿಮಾ ಫೇಮ್ ಕಮಿಡಿಯನ್ ರಾಹುಲ್ ರಾಮಕೃಷ್ಣ, ಟಾಲಿವುಡ್ ನಲ್ಲಿ ಟಾಪ್ ಕಾಮಿಡಿಯನ್ ಗಳಲ್ಲಿ ಒಬ್ಬರು. ಆದ್ರೆ ಮೊನ್ನೆ (ಫೆಬ್ರವರಿ 4) ಮಧ್ಯರಾತ್ರಿ ಸಿನಿಮಾಗಳಿಗೆ ಗುಡ್ ಬೈ ಹೇಳುತ್ತಿರುವುದಾಗಿ ರಾಮಕೃಷ್ಣ ಟ್ವೀಟ್ ಮಾಡಿದ್ದರು. ಇದರಿಂದ ಸಾಕಷ್ಟು ಮಂದಿ ಇದೇನು ಜೋಕಾ..? ಸಿರಿಯಸ್ಸಾ..? ಇದೇನಾದ್ರೂ ವೆಬ್ ಸಿರೀಸ್ ಸ್ಟಂಟಾ..? ಅಂತಾ ನಾನಾ ರೀತಿಯ ಕಮೆಂಟ್ ಗಳನ್ನು ಮಾಡಿದ್ದರು.
ಇದೀಗ ಈ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿರುವ ರಾಮಕೃಷ್ಣ, ಅದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಅದೆಲ್ಲಾ ಬರಿ ಜೋಕ್, ಪೂಲ್ಸ್..ನಾನ್ಯಾಕೆ ಒಳ್ಳೆ ಸಂಭಾವಣೆ, ಐಷಾರಾಮಿ ಜೀವನ ಮುಂತಾದ ಹಲವಾರು ಪ್ರಯೋಜನಗಳಿರುವ ಜೀವನವನ್ನು ತ್ಯಜಿಸಬೇಕು.
ನಾನು ನಿಜವಾಗಿಯೂ ರಿಟೈರ್ಮೆಂಟ್ ಹೇಳಿದ್ದೇನೆಂದು ಭಾವಿಸಿ, ನನ್ಗೆ ಕರೆ ಮಾಡಿ ಕಂಗ್ರಾಟ್ಸ್ ಹೇಳಿದ್ದು, ನನಗೆ ಆಶ್ಚರ್ಯವಾಯಿತು ಎಂದು ರಾಹುಲ್ ರಾಮಕೃಷ್ಣ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಆದ್ರೆ ರಾಹುಲ್ ರಾಮಕೃಷ್ಣ ಟ್ವೀಟ್ ಗೆ ನೆಟಿಜನ್ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಯಾಕೆ ಆ ಟ್ವೀಟ್ ಮಾಡಿದ್ದು? ಈಗ ತಮಾಷೆ ಮಾಡೋದು ಯಾಕೆ?’,’ ಯಾರೂ ಮೂರ್ಖರಲ್ಲ.. ನಿಮ್ಮ ಟ್ವೀಟ್ಗಳ ಮೂಲಕ ನೀವು ನಂಬಲರ್ಹರಲ್ಲ ಎಂದು ಸಾಬೀತುಪಡಿಸಿದ್ದೀರಿ’, ‘ಕಾಮಿಡಿ ಸಿನಿಮಾಗಳಲ್ಲಿ ಮಾಡಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.