ಮೆಗಾ ಹರಾಜಿಗೆ ರಾಹುಲ್, ರಶೀದ್.. ಇಲ್ಲಿದೆ ರಿಟೈನ್ ಆಟಗಾರರ ಪಟ್ಟಿ.. Rahul Rashid saaksha tv
ಐಪಿಎಲ್ 15ನೇ ಆವೃತ್ತಿಗೆ ತಂಡಗಳು ರಿಟೈನ್ ಮಾಡುವ ಆಟಗಾರರ ಪಟ್ಟಿ ರಿಲೀಸ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 4 ಆಟಗಾರರನ್ನು ಉಳಿಸಿಕೊಂಡಿದೆ.
ಸನ್ ರೈಸರ್ಸ್ ಹೈದ್ರಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಲಾ 3 ಆಟಗಾರರನ್ನು ಉಳಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ಕೇವಲ 2 ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ರಿಟೈನ್ಡ್ ಆಟಗಾರರು:
ಸಿಎಸ್ಕೆ: ರವೀಂದ್ರ ಜಡೇಜಾ,ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ
ಕೆಕೆಆರ್: ಸುನೀಲ್ ನರೈನ್, ಆ್ಯಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್
ಮುಂಬೈ ಇಂಡಿಯನ್ಸ್: ರೊಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಕಿರಾನ್ ಪೊಲಾರ್ಡ್, ಸೂರ್ಯಕುಮಾರ್
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಷಾ, ಅಕ್ಸರ್ ಪಟೇಲ್, ಅನ್ರಿಚ್ ನೋರ್ಟ್ಜೆ
ಆರ್ಸಿಬಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಸಿರಾಜ್
ಎಸ್ಆರ್ಎಚ್: ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರನ್ ಮಲಿಕ್
ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಅರ್ಶದೀಪ್ ಸಿಂಗ್
ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರತೀ ಫ್ರಾಂಚೈಸಿಗಳಿಗೆ 90 ಕೋಟಿ ರೂಪಾಯಿ ಆಟಗಾರರ ಖರೀದಿಗೆ ವಿನಿಯೋಗಿಸಬಹುದು. ಆದರೆ ಆಟಗಾರರ ರಿಟೆನ್ಶನ್ ಆದ ಮೇಲೆ ತಂಡಗಳ ಮೊತ್ತ ಕಡಿತಗೊಂಡಿದೆ.
ತಂಡ ಮತ್ತು ಉಳಿಕೆ ಮೊತ್ತ
ಸಿಎಸ್ಕೆ: 48 ಕೋಟಿ
ಕೆಕೆಆರ್: 48 ಕೋಟಿ
ಡೆಲ್ಲಿ: 48 ಕೋಟಿ
ಮುಂಬೈ: 48 ಕೋಟಿ
ಎಸ್ಆರ್ಎಚ್: 68 ಕೋಟಿ
ಆರ್ಸಿಬಿ: 57 ಕೋಟಿ
ರಾಜಸ್ಥಾನ್: 62 ಕೋಟಿ
ಪಂಜಾಬ್: 78 ಕೋಟಿ
ಐಪಿಎಲ್ನ ಹೊಸ ತಂಡಗಳಾದ ಲಖ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಹರಾಜಿನಲ್ಲಿ ಹೆಸರು ನೋಂದಾಯಿಸುವ ಆಟಗಾರರ ಪೈಕಿ ತಲಾ ಮೂರು ಆಟಗಾರರನ್ನು ಖರೀದಿ ಮಾಡಿಕೊಳ್ಳಬಹುದು. ಮೆಗಾ ಹರಾಜಿನಲ್ಲಿ ಹಾರ್ದಿಕ್, ರಾಹುಲ್, ಅಶ್ವಿನ್ , ರಶೀದ್ ಖಾನ್ ಮತ್ತು ಈಶನ್ ಕಿಶನ್ ರಂತಹ ಖ್ಯಾತ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಿದ್ದಾರೆ.