ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯುಎಇ ಐಪಿಎಲ್ ಟೂರ್ನಿಯಿಂದ ಹೊರ ನಡೆದ ಈ ಐವರು ಕ್ರಿಕೆಟಿರು…!

saaksha tv by saaksha tv
September 5, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಯುಎಇ ಐಪಿಎಲ್ ಟೂರ್ನಿಯಿಂದ ಹೊರ ನಡೆದ ಈ ಐವರು ಕ್ರಿಕೆಟಿರು…!

2020ರ ಐಪಿಎಲ್ ಟೂರ್ನಿ ಯುಎಇನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಈಗಾಗಲೇ ಎಂಟೂ ಫ್ರಾಂಚೈಸಿಗಳ ಆಟಗಾರರು ಯುಎಇನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋವಿಡ್ ಆತಂಕದಿಂದ ಹೊರಬಂದಿದೆ. ಆದ್ರೆ ತಂಡದ ಪ್ರಮುಖ ಇಬ್ಬರು ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ತಲಾ ಒಬ್ಬೊಬ್ಬ ಆಟಗಾರ ಟೂರ್ನಿಗೆ ಲಭ್ಯವಿರುವುದಿಲ್ಲ. ಈಗಾಗಲೇ ಈ ಮೂರು ತಂಡಗಳು ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಆದ್ರೆ ಸಿಎಸ್‍ಕೆ ತಂಡ ಇನ್ನೂ ಕೂಡ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ.
ಸುರೇಶ್ ರೈನಾ– ಖುಷಿ ಖುಷಿಯಾಗಿ ಯುಎಇಗೆ ಸಿಎಸ್‍ಕೆ ತಂಡದೊಂದಿಗೆ ಹೋಗಿದ್ದ ಸುರೇಶ್ ರೈನಾ, ಸಡನ್ ಆಗಿ ತಂಡದಿಂದ ಹೊರನಡೆದಿದ್ದರು. ತನ್ನ ಸೋದರ ಅತ್ತೆಯ ಕುಟುಂಬದ ಮೇಲೆ ಅನಾಮಿಕರು ದಾಳಿ ನಡೆಸಿದ್ದರು ಎಂಬ ಕಾರಣ ನೀಡಿ ಟೂರ್ನಿಯಿಂದ ಹೊರಬಂದ ಸುರೇಶ್ ರೈನಾ ಈಗ ಮತ್ತೆ ತಂಡವನ್ನು ಸೇರಿಸಿಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಸುರೇಶ್ ರೈನಾ ತಂಡದಿಂದ ಹೊರನಡೆದಾಗ ಸಿಎಸ್‍ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಕಿಡಿಕಾರಿದ್ದರು. ಆಮೇಲೆ ಶಾಂತವಾಗಿದ್ರೂ ಸುರೇಶ್ ರೈನಾ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ರೈನಾಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ.
ಹರ್ಭಜನ್ ಸಿಂಗ್
ಸಿಎಸ್‍ಕೆ ತಂಡಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ. ಮೊದಲೇ ಕೋವಿಡ್ ಮತ್ತು ರೈನಾ ಘಟನೆಯಿಂದ ಕಂಗೆಟ್ಟಿದ್ದ ಸಿಎಸ್‍ಕೆ ತಂಡಕ್ಕೆ ಆಘಾತ ನೀಡಿದ್ದು ಟರ್ಬನೇಟರ್ ಹರ್ಭಜನ್ ಸಿಂಗ್. ಕೊನೆಯ ಕ್ಷಣದಲ್ಲಿ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರನಡೆದಿದ್ದಾರೆ. ಹರ್ಭಜನ್ ಸಿಂಗ್ ಬದಲಿ ಆಟಗಾರರನ್ನು ಸಿಎಸ್‍ಕೆ ಆಯ್ಕೆ ಮಾಡಿಕೊಂಡಿಲ್ಲ. ಆದ್ರೆ, ತಂಡದಲ್ಲಿ ಇಮ್ರಾನ್ ತಾಹೀರ್, ಮಿಟ್ಚೆಲ್ ಸ್ಯಾಂಟ್ನರ್ ಮತ್ತು ಪಿಯೂಷ್ ಚಾವ್ಲಾ ಸೇರಿ ಮೂವರು ಸ್ಪಿನ್ನರ್‍ಗಳಿದ್ದಾರೆ.

Related posts

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

November 5, 2026
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

November 5, 2026

ಜೇಸನ್ ರಾಯ್
ಜೇಸನ್ ರಾಯ್.. ಇಂಗ್ಲೆಂಡ್ ನ ಆರಂಭಿಕ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ತಂಡ 1.5 ಕೋಟಿ ರೂಪಾಯಿ ಕೊಟ್ಟು ಜೇಸನ್ ರಾಯ್ ಅವರನ್ನು ಖರೀದಿ ಮಾಡಿತ್ತು.ಆದ್ರೆ ಇತ್ತೀಚೆಗೆ ಅಭ್ಯಾಸದ ವೇಳೆ ಜೇಸನ್ ರಾಯ್ ಅವರು ಗಾಯಗೊಂಡಿದ್ದರು. ಹೀಗಾಗಿ ಅವರು ಪಾಕ್ ವಿರುದ್ಧದ ಟಿ-ಟ್ವೆಂಟಿ ಸರಣಿಯಿಂದ ಹೊರನಡೆದಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಕಾನೆ ರಿಚಡ್ಸನ್
ಕಾನೆ ರಿಚಡ್ಸನ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್. ಆಸ್ಟ್ರೇಲಿಯಾದ ವೇಗ ದೂತನಾಗಿರುವ ಕಾನೆ ರಿಚಡ್ರ್ಸನ್ ಅವರನ್ನು ನಾಲ್ಕು ಕೋಟಿ ರೂಪಾಯಿಗೆ ಆರ್‍ಸಿಬಿ ಖರೀದಿ ಮಾಡಿತ್ತು. ಆದ್ರೆ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ಬದಲಿಗೆ ಆಡಮ್ ಝಾಂಪಾ ಅವರು ಆರ್‍ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಲಸಿತ್ ಮಾಲಿಂಗಾ..
ಲಸಿತ್ ಮಾಲಿಂಗಾ… ಮುಂಬೈ ಇಂಡಿಯನ್ಸ್ ತಂಡದ ಖಾಯಂ ವೇಗಿ. ಶ್ರೀಲಂಕಾದ ವೇಗದ ಬೌಲರ್ ಆಗಿರುವ ಲಸಿತ್ ಮಾಲಿಂಗಾ ಅವರು ಐಪಿಎಲ್ ಟೂರ್ನಿಯ ಯಶಸ್ವಿ ಬೌಲರ್. ಆದ್ರೆ ವೈಯಕ್ತಿಕ ಕಾರಣ ನೀಡಿ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಲಸಿತ್ ಮಾಲಿಂಗಾ ಬದಲು ಮುಂಬೈ ಇಂಡಿಯನ್ಸ್ ತಂಡ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

Tags: #Jason Roy#Kane Richardson#Lasith MalingaCoronaCOVID-19cskdelhi capitalsharbhajan singhIPL 2020ipl uaemumbai indiansRCBSuresh Raina
ShareTweetSendShare
Join us on:

Related Posts

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

by Shwetha
November 5, 2026
0

2027ರ ಜನಗಣತಿಯ ಜನಸಂಖ್ಯೆ ಗಣತಿ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯಲಿರುವ ಜನಗಣತಿಯಲ್ಲಿ ಸಾರ್ವಜನಿಕರಿಗೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

by Shwetha
November 5, 2026
0

ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್...

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

GBA ಚುನಾವಣೆ ನಡೆಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಡುವು; ಡಿಸೆಂಬರ್ 31ರೊಳಗೆ 5 ನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಸೂಚನೆ

by Shwetha
November 5, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಗಡುವು ನೀಡಿದೆ. 2026ರ ಡಿಸೆಂಬರ್ 31ರೊಳಗೆ...

ಕನ್ನಡಿಗರ ಉದ್ಯೋಗದ ಹಕ್ಕು ಕೆಣಕಿ ಕೈಸುಟ್ಟುಕೊಂಡ ತಮಿಳುನಾಡು ಐಪಿಎಸ್ ಅಧಿಕಾರಿ:ಕೆಲಸವಿಲ್ಲದವರು ಎಂದು ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಅಧಿಕಾರಿಗೆ ಕನ್ನಡಿಗರ ಡಿಜಿಟಲ್ ಮಂಗಳಾರತಿ- ಕರವೇ ಅಭಿಯಾನಕ್ಕೆ ವ್ಯಂಗ್ಯವಾಡಿ ಕಾಮೆಂಟ್ ಡಿಲೀಟ್ ಮಾಡಿದ ಧನುಷ್ ಕುಮಾರ್

ಕನ್ನಡಿಗರ ಉದ್ಯೋಗದ ಹಕ್ಕು ಕೆಣಕಿ ಕೈಸುಟ್ಟುಕೊಂಡ ತಮಿಳುನಾಡು ಐಪಿಎಸ್ ಅಧಿಕಾರಿ:ಕೆಲಸವಿಲ್ಲದವರು ಎಂದು ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಅಧಿಕಾರಿಗೆ ಕನ್ನಡಿಗರ ಡಿಜಿಟಲ್ ಮಂಗಳಾರತಿ- ಕರವೇ ಅಭಿಯಾನಕ್ಕೆ ವ್ಯಂಗ್ಯವಾಡಿ ಕಾಮೆಂಟ್ ಡಿಲೀಟ್ ಮಾಡಿದ ಧನುಷ್ ಕುಮಾರ್

by Shwetha
November 5, 2026
0

ಬೆಂಗಳೂರು: ರಾಜಧಾನಿಯ ಐಟಿ ಮತ್ತು ಬಿಟಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ...

ನಮಗೆ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿಲ್ಲ, ಅದು ನಮ್ಮದೇ ಸ್ವಂತ ಜಾಗ: ಸಚಿವ ಯತೀಂದ್ರ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಡಕ್ ತಿರುಗೇಟು

ನಮಗೆ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿಲ್ಲ, ಅದು ನಮ್ಮದೇ ಸ್ವಂತ ಜಾಗ: ಸಚಿವ ಯತೀಂದ್ರ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಡಕ್ ತಿರುಗೇಟು

by Shwetha
November 5, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಪ್ರದಾಯಗಳು ಹಾಗೂ ಆಚರಣೆಗಳ ಕುರಿತು ಎದ್ದಿರುವ ಗೊಂದಲಗಳ ನಡುವೆಯೇ, ಮೈಸೂರು ಅರಮನೆಯ ಮಾಲೀಕತ್ವದ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ರಾಜಮನೆತನದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram