Raichur – ಮರಕ್ಕೆ ಲಾರಿ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು
ರಾಯಚೂರು : ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಗುಂಜಳ್ಳಿ ಬಳಿ ನಡೆದಿದೆ.
20 ವರ್ಷದ ಗಿಲ್ಲೆಸೂಗೂರು ಗ್ರಾಮದ ಅನಿಲ್, 35 ವರ್ಷದ ರಂಜಾನ್ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ಇವರು ಲಾರಿಯಲ್ಲಿ ಮಹೆಬೂಬ್ ನಗರದಲ್ಲಿನ ಫಾರಂನಿಂದ ಕೋಳಿಗಳನ್ನು ತೆಗೆದುಕೊಂಡು ರಾಯಚೂರು ತಾಲೂಕಿನಲ್ಲಿರುವ ವಿವಿಧ ಚಿಕನ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು.
ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








