Raichur | ಶಾಲೆಗೆ ಹೋಗಬೇಕಂದ್ರೆ ವಿದ್ಯಾರ್ಥಿಗಳು ಪ್ಯಾಂಟ್ ಬಿಚ್ಚಲೇಬೇಕು!!
ರಾಯಚೂರು : ನೀವು ನಂಬಿದರೇ ನಿಂಬಿ ಬಿಟ್ಟರೇ ಬಿಡಿ… ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ್ರೆ ಪ್ಯಾಂಟ್ ಬಿಚ್ಚಲೇ ಬೇಕು..!!
ಗಾಬರಿಯಾಗಬೇಡಿ!!!
ದೇವರಗುಡಿ ಗ್ರಾಮದಿರಂದ ಸಿಂಧನೂರು ಪಟ್ಟಣಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಸಿಂಧನೂರಿನ ಸರ್ಕಾರಿ, ಖಾಸಗಿ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಹಳ್ಳದಾಟಬೇಕಾಗಿದೆ.
ಆದ್ರೆ ಹೀಗೆ ಹಳ್ಳದಾಟುವ ವೇಳೆ ಪ್ಯಾಂಟ್ ಬಿಚ್ಚಿ ಅಂಡರ್ವೇರ್ ಮೇಲೆ ಅರೆಬೆತ್ತಲೆಯಾಗಿ ಹಳ್ಳ ದಾಟಿ ಶಾಲೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೈಯಲ್ಲಿ ಪಾಠಿಚೀಲ,ಚಪ್ಪಲಿ, ಪ್ಯಾಂಟ್ ಹಿಡಿದು ವಿದ್ಯಾರ್ಥಿಗಳು ಹಳ್ಳದಾಟುತ್ತಿದ್ದಾರೆ.
ಇತ್ತ ಸೂಕ್ತ ರಸ್ತೆ ಸಂಪರ್ಕ ಇಲ್ಲದಿರುವ ಕಾರಣ ಗ್ರಾಮದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ದೂರವಾಗಿದ್ದಾರೆ.
ಅಂದಹಾಗೆ ಜಿಲ್ಲಾ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ದೇವರಗುಡಿ ವಿದ್ಯಾರ್ಥಿನಿಯರಿಗೆ ರಸ್ತೆ ವ್ಯವಸ್ಥೆ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದ್ರೆ ಈ ವರೆಗೂ ರಸ್ತೆ ನಿರ್ಮಾಣವಾಗಿಲ್ಲ.