ರೈಲಿನಲ್ಲಿ ರೀಲ್ಸ್ ಮಾಡುವವರಿಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ. ರೈಲಿನೊಳಗಿನ ಸುರಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆಗೆ ಧಕ್ಕೆ ಉಂಟಾದರೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಮಂಡಳಿಯು ಎಲ್ಲ ವಲಯಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ರೈಲಿನಲ್ಲಿ ರೀಲ್ಸ್ ಮಾಡುವುದು ಕಂಡು ಬಂದರೆ, ಯಾವುದೇ ರೀತಿಯ ತೊಂದರೆ ಉಂಟಾದರೆ, ಅವರನ್ನು ಬಂಧಿಸಿ, FIR ದಾಖಲಿಸಲಾಗುತ್ತದೆ. ರೈಲ್ವೇ ಕೋಚ್ ಅಥವಾ ರೈಲ್ವೆ ಆವರಣದಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆಯು ಸ್ಪಷ್ಟಪಡಿಸಿದೆ.
ರೈಲ್ವೆ ಇಲಾಖೆ, ಜನರ ಸುರಕ್ಷತೆಗೆ ಮೊದಲ ಆಧ್ಯತೆ ನೀಡಿ, ಇಂತಹ ಕ್ರಮಗಳನ್ನು ಕೈಗೊಂಡಿದೆ.








