ಭಾರತೀಯ ರೈಲ್ವೆ – ಪ್ರಯಾಣಿಕರ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ಚಿಂತನೆ
passenger trains into express
ಹೊಸದಿಲ್ಲಿ, ಅಕ್ಟೋಬರ್30: ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೌಲಭ್ಯವನ್ನು ನೀಡಲು ಭಾರತೀಯ ರೈಲ್ವೆ ಚಿಂತನೆ ನಡೆದಿದೆ. passenger trains into express
ಭಾರತೀಯ ರೈಲ್ವೆ ಹಲವಾರು ಪ್ರಯಾಣಿಕರ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ಮತ್ತು ರೈಲು ಸೇವೆಗಳನ್ನು ವೇಗಗೊಳಿಸಲು ಯೋಜಿಸುತ್ತಿದೆ. ಆದರೆ, ರೈಲ್ವೆ ಮಂಡಳಿಯು ಇನ್ನೂ ಯಾವುದೇ ದೃಢವಾದ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯೊಳಗೆ ಮೊಳಗಿದ ಮೋದಿ ಘೋಷಣೆ ? ನಿಜವಾಗಿ ಅಲ್ಲಿ ನಡೆದದ್ದೇನು ?
ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಲು ಯೋಜಿಸಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ರೈಲ್ವೆ ಮಂಡಳಿಯು ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.
ರೈಲ್ವೆ ಪ್ರಯಾಣಿಕರ ರೈಲುಗಳನು ಪರಿವರ್ತನೆಯಾದರೆ ಎಸಿ ಸೌಕರ್ಯಗಳು ಸೇರಿದಂತೆ ಕಾಯ್ದಿರಿಸಿದ ವಸತಿ ಸೌಕರ್ಯಗಳ ಲಭ್ಯತೆಯಿಂದಾಗಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತವೆ ಮತ್ತು ಪ್ರಯಾಣದ ಸಮಯ ಕಡಿಮೆ ಮತ್ತು ವೇಗವಾಗಿ ಸಾಗುವುದರಿಂದ ಪ್ರಯಾಣಿಕರು ಸಹ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಇದು ಇನ್ನೂ ಯೋಜನಾ ಹಂತದಲ್ಲಿದೆ ಮತ್ತು ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ