Railway accidents: 2021ರ ರೈಲ್ವೆ ಅಫಘಾತಗಳಲ್ಲಿ ಶೇಕಡ 38 ರಷ್ಟು ಹೆಚ್ಚಳ – NCRB
ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೇ ಜಾಲವನ್ನ ಹೊಂದಿರುವ ಭಾರತೀಯ ರೈಲ್ವೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021 ರಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸಿ. ಸುಮಾರು 38.2% ನಷ್ಟು ಹೆಚ್ಚಳ ದಾಖಲಾಗಿದೆ. ವರದಿಯಾದ 17,993 ಅಪಘಾತಗಳಲ್ಲಿ ಅತಿಹೆಚ್ಚು ಅಪಘಾತಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, 3,488 ರೈಲ್ವೆ ಅಪಘಾತಗಳೊಂದಿಗೆ 19.4% ಅನುಪಾತ ಹೊಂದಿದೆ. ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಮಾಡಿದೆ.
ರೈಲ್ವೇ ಇಲಾಖೆ ಎಲ್ಲಾ ಸುರಕ್ಷತಾ ಕ್ರಮಗಳನ್ನ ಅಳವಡಿಸಿಕೊಂಡ ನಂತರವೂ ನಿರ್ಲಕ್ಷ್ಯ ಅಥವಾ ಹಳಿಗಳ ಅತಿಕ್ರಮಣ, ಚಾಲನೆಯಲ್ಲಿದ್ದಾಗ ಅಫಘಾತ ಇತರೆ ಕಾರಣಗಳಿಂದ ಹೆಚ್ಚಿನ ಅಫಘಾತಗಳು ಸಂಭವಿಸಿವೆ. .
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ 69 ನೇ ಆವೃತ್ತಿ ವರದಿಯ ಅಂಕಿ ಅಂಶಗಳ ಪ್ರಕಾರ “17,993 ರೈಲ್ವೆ ಅಪಘಾತಗಳಿಂದ 1,852 ಜನರಿಗೆ ಗಾಯಗಳನ್ನ ಉಂಟುಮಾಡಿದ್ದು, 2021 ರಲ್ಲಿ 16,431 ಜನರಿಗೆ ಸಾವಿಗೆ ಕಾರಣವಾಗಿದೆ. 2019 ರಲ್ಲಿ, 24,619 ರೈಲ್ವೆ ಅಪಘಾತಗಳು ವರದಿಯಾಗಿವೆ, ಇದರಲ್ಲಿ 1,762 ರೈಲ್ವೆ ಅಪಘಾತಗಳು ಸೇರಿವೆ. NCRB ಡೇಟಾ ತೋರಿಸುತ್ತದೆ.
ಮಹಾರಾಷ್ಟ್ರದ ನಂತರ, 2021 ರಲ್ಲಿ ರೈಲ್ವೆಯಲ್ಲಿ ಸಂಭವಿಸಿದ ಅಪಘಾತಗಳ ಒಟ್ಟು ಪ್ರಕರಣಗಳಲ್ಲಿ 13.5% ರಷ್ಟು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ರೈಲ್ವೆಯಾದ್ಯಂತ ಒಟ್ಟು 2,425 ಅಪಘಾತಗಳ ಪ್ರಕರಣಗಳು ದಾಖಲಾಗಿವೆ.